ಕರ್ನಾಟಕದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ…

67
firstsuddi

ಬೆಂಗಳೂರು : ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರಿ ನಿಧಾನವಾಗಿ ಆವರಿಸುತ್ತಿದೆ. ನಿನ್ನೆ ಒಂದೇ ದಿನ ಐವರಲ್ಲಿ ಸೋಂಕು ದೃಢವಾಗಿದೆ. ಈ ಕುರಿತು ಆರೋಗ್ಯ ಸಚಿವ ಸುಧಾಕರ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಮೂವರು ಪುರುಷರು, ಇಬ್ಬರು ಮಹಿಳೆಯರಲ್ಲಿ ಓಮಿಕ್ರಾನ್ ದೃಢವಾಗಿದ್ದು, ಈ ಮೂಲಕ ಓಮಿಕ್ರಾನ್ ಸೋಂಕು ರಾಜ್ಯದಲ್ಲಿ 8ಕ್ಕೆ ಏರಿಕೆಯಾಗಿದೆ.

ಇಂಗ್ಲೆಂಡ್​ನಿಂದ ವಾಪಸಾಗಿದ್ದ ಯುವತಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಯುವತಿಯು ಡಿ.13ರಂದು ಇಂಗ್ಲೆಂಡ್​ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಬೆಂಗಳೂರು ಏರ್ ಪೋರ್ಟ್ ಟೆಸ್ಟಿಂಗ್ ನಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದೆ. ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಡಿ.14ಕ್ಕೆ ಯುವತಿ ಮನವಿ ಮೇರೆಗೆ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ದೃಢವಾಗಿತ್ತು. ಸೋಂಕಿತ ಯುವತಿಗೆ ಪ್ರಾಥಮಿಕ ಸಂಪರ್ಕಿತರು ಇಲ್ಲ. ಈಕೆ 2 ಡೋಸ್ ಲಸಿಕೆ ಪಡೆದಿದ್ದರು.

ದೆಹಲಿಯಿಂದ ಆಗಮಿಸಿದ್ದ 70 ವರ್ಷದ ವೃದ್ಧೆ, ಹಾಗೂ 36 ವರ್ಷದ ವ್ಯಕ್ತಿಗೆ ಓಮಿಕ್ರಾನ್ ದೃಢಪಟ್ಟಿದೆ. ರಾಜಸ್ಥಾನದಲ್ಲಿ ನಡೆದಿದ್ದ ದೆಹಲಿ ಮೂಲದವರ ಮದುವೆ ಹಿನ್ನೆಲೆಯಲ್ಲಿ ಡಿ.3ರಂದು ದೆಹಲಿಯಿಂದ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯಲ್ಲಿ ಓಮಿಕ್ರಾನ್ ಸೋಂಕಿತನ ಸಂಪರ್ಕದಲ್ಲಿದ್ದರಿಂದ ಡಿ.5ರಂದು ಇಬ್ಬರ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಡಿ.6ರಂದು ಕೊರೊನಾ ಪಾಸಿಟಿವ್ ದೃಢವಾಗಿತ್ತು. ಜಿನೋಮಿಕ್ ಸೀಕೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ದೃಢವಾಗಿತ್ತು. ಮೂವರು ಪ್ರಾಥರ್ಮಿಕ ಸಂಪರ್ಕಿತರಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದೆ. ಇಬ್ಬರು ದ್ವಿತೀಯ ಸಂಪರ್ಕಿತರು. ಇಬ್ಬರು ಕೂಡ 2 ಡೋಸ್ ಲಸಿಕೆ ಪಡೆದಿರುವವರಾಗಿದ್ದಾರೆ.

ಡಿ.13ರಂದು ನೈಜೀರಿಯಾ ಏರ್ಪೋರ್ಟ್ ನಿಂದ ಪ್ರಯಾಣ ಬೆಳೆಸಿರುವ 52 ವರ್ಷದ ವ್ಯಕ್ತಿಗೆ ನೈಜೀರಿಯಾ ಏರ್ ಪೋರ್ಟ್ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದಿದೆ. ಡಿ.14ರಂದು ಬೆಂಗಳೂರು ಏರ್ ಪೋರ್ಟ್ ನಲ್ಲಿ ಟೆಸ್ಟಿಂಗ್ ವೇಳೆ ಪಾಸಿಟಿವ್ ಇರುವುದು ದೃಢವಾಗಿದೆ. ಅಂದೇ ಬೆಂಗಳೂರಿನಿಂದ ಬೆಳಗಾವಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಬಳಿಕ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇವರಿಗೆ ಇಬ್ಬರೊಂದಿಗೆ ಪ್ರಾಥಮಿಕ ಸಂಪರ್ಕವಿದ್ದು, ಆ ಇಬ್ಬರೂ ಕ್ವಾರಂಟೈನ್ ಆಗಿದ್ದಾರೆ. ಈ ವ್ಯಕ್ತಿ ಕೂಡ 2 ಡೋಸ್ ಲಸಿಕೆ ಪಡೆದಿರುವವರಾಗಿದ್ದಾರೆ.

33 ವರ್ಷ ವ್ಯಕ್ತಿಯು ಡಿ.8ರಂದು ದ.ಆಫ್ರಿಕಾದಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದಾರೆ. ದೆಹಲಿ ಏರ್ ಪೋರ್ಟ್ ಟೆಸ್ಟ್ ನಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು. ಆದರೂ ಡಿ.9ರಂದು ಹೋಂ ಐಸೋಲೇಷನ್ ಆಗಿದ್ದರು. ಡಿ.10ರಂದು ಕೊರೊನಾ ಲಕ್ಷಣಗಳು ಪತ್ತೆಯಾಗಿತ್ತು. ಹೀಗಾಗಿ ಡಿ.10ರಂದು ಖುದ್ದು ಕೊರೊನಾ ಟೆಸ್ಟ್ ಗೆ ಒಳಪಟ್ಟಿದ್ದರು. ಡಿ.11ರಂದು ಕೊರೊನಾ ಪಾಸಿಟಿವ್ ದೃಢವಾಗಿ ಕೂಡಲೇ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ನಡೆಸಿದ ಜಿನೋಮಿಕ್ ಸೀಕೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ಇರುವುದು ದೃಢವಾಗಿತ್ತು. ನಾಲ್ವರು ಪ್ರಾಥಮಿಕ ಸಂಪರ್ಕಿತರಿಗೆ ನೆಗೆಟಿವ್ ರಿಪೋರ್ಟ್ ಬಂದಿದ್ದು, 25 ದ್ವಿತೀಯ ಸಂಪರ್ಕಿತರಿಗೂ ನೆಗೆಟಿವ್ ಬಂದಿದೆ. ಈ ವ್ಯಕ್ತಿ ಕೂಡ 2 ಡೋಸ್ ಲಸಿಕೆ ಪಡೆದಿರುವವರಾಗಿದ್ದಾರೆ.