ಕಾಡಾನೆ ದಾಳಿ, ಮಹಿಳೆ ಜೊತೆ ಹಸು ಕರುವನ್ನೂ ತುಳಿದು ಸಾಯಿಸಿರುವ ಆನೆ…

216
firstsuddi

ಹಾಸನ : ಕಾಡಾನೆ ದಾಳಿ ಮಾಡಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಷ್ಪ(38) ಮೃತ ಮಹಿಳೆ ಎನ್ನಲಾಗಿದ್ದು, ಬೆಳಿಗ್ಗೆ ಜಮೀನಿಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿ ಮಹಿಳೆ ಜೊತೆಗೆ ಹಸು ಕರುವನ್ನೂ ತುಳಿದು ಸಾಯಿಸಿದ್ದು, ಪತಿ ಠಾಕೂರ್ ಸಿಂಗ್ ಅವರು ಸ್ಥಳದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.