ಉಡುಪಿ: ಕೊರೋನ ವೈರಸ್ ಸೋಂಕು ಶಂಕಿತ ಶಿರ್ವ ಮೂಲದ ಯುವಕನೋರ್ವನನ್ನು ಉಡುಪಿಯ ಜಿಲ್ಲಾಸ್ಪತ್ರೆಗೆ ಶುಕ್ರವಾರ ದಾಖಲಿಸಲಾಗಿದೆ. ಶಿರ್ವ ಮೂಲದ ಯುವಕನಲ್ಲಿ ಕೆಮ್ಮು ಮತ್ತು ಜ್ವರದ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಐಸೋಲೇಟೆಡ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈತ ನಿರ್ಬಂಧಿತ ಜಪಾನ್ ಹಡಗಿನಲ್ಲಿದ್ದು ಇವರಿಗೆ ಈ ಹಿಂದೆ ತಪಾಸಣೆ ವೇಳೆ ವರದಿ ನೆಗೆಟಿವ್ ಬಂದಿತ್ತು ಆದರೆ ರಜೆಯಲ್ಲಿ ಉಡುಪಿಗೆ ಬಂದಾಗ ಆನಾರೋಗ್ಯ ಉಂಟಾಗಿದ್ದು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ ಈತನ ಗಂಟಲ ದ್ರವ್ಯ ಹಾಗೂ ರಕ್ತವನ್ನು ಪರೀಕ್ಷೆಗಾಗಿ ರವಾನಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಸುಧೀರ್ ಚಂದ್ರ ಸೂಡ ಹೇಳಿದ್ದಾರೆ. ಕಳೆದ ಎರಡು ದಿನಗಳ ಅಂತರದಲ್ಲಿ 4 ಶಂಕಿತ ಕರೋನಾ ಪ್ರಕರಣಗಳು ಉಡುಪಿಯಲ್ಲಿ ಪತ್ತೆಯಾಗಿವೆ










