ಚಿಕ್ಕಮಗಳೂರು : ಸಂಸದ ತೇಜಸ್ವಿ ಸೂರ್ಯ ಅವರು ರಾಜಕೀಯ ಜಂಜಾಟ ಮರೆತು ಫ್ರೀ ಮೂಡ್ನಲ್ಲಿ ಕಾಫಿ ಕಣದಲ್ಲಿ ಹುಡುಗರ ಜೊತೆ ಕ್ರಿಕೆಟ್ ಆಡಿದ್ದಾರೆ. ಜಿಲ್ಲೆಯ ಎನ್.ಆರ್. ಪುರ ತಾಲ್ಲೂಕಿನ ಚಿಗಸೆ ಗ್ರಾಮದಲ್ಲಿ ಇತ್ತೀಚೆಗೆ ಬೆಂಗಳೂರು ಸಂಸದರಾದ ತೇಜಸ್ವಿ ಸೂರ್ಯ ಅವರ ಸಂಬಂಧಿ ಮಾಲ್ತೇಶ್ ಎಂಬುವವರ ಮನೆ ಗೃಹ ಪ್ರವೇಶ ನಡೆದಿತ್ತು. ಆಗಾ ಸಂಸದ ತೇಜಸ್ವಿ ಸೂರ್ಯ ಅವರು ಬಂದಿರಲಿಲ್ಲ. ಆದ್ದರಿಂದ ಇಂದು ತನ್ನ 12ಜನ ಸ್ನೇಹಿತರೊಂದಿಗೆ ಅವರ ಮನೆಗೆ ಬಂದಿದ್ದು, ಇದೇ ವೇಳೆ ಕಾಫಿ ಕಣದಲ್ಲಿ ಬಾಳೆಹೊನ್ನೂರಿನ ಹುಡುಗರು ಕ್ರಿಕೆಟ್ ಆಡುತ್ತಿದ್ದನ್ನು ಕಂಡು ತನ್ನ ಸ್ನೇಹಿತರೊಂದಿಗೆ ಅವರೊಂದಿಗೆ ಬೆರೆತು ಕ್ರಿಕೆಟ್ ಆಡಿದ್ದಾರೆ. ನಾನು ಒಬ್ಬ ಸಂಸದ ಅನ್ನೋದನ್ನು ಬಿಟ್ಟು ಎಲ್ಲರೊಂದಿಗೆ ಬೆರೆತು ನಾನು ಒಬ್ಬ ಉತ್ತಮ ಕ್ರಿಕೆಟಿಗ ಎಂದು ತೋರಿಸಿದ್ದಾರೆ. ಕ್ರಿಕೆಟ್ ಬಳಿಕ ಹುಡುಗರೊಂದಿಗೆ ಬಾಳೆಹೊನ್ನೂರಿನ ಸುತ್ತ ಮುತ್ತ ಕಾಫಿ ತೋಟ, ಹೊಲ-ಗದ್ದೆಗಳನ್ನು ಸುತ್ತು ಹೊಡೆದು ಮಲೆನಾಡ ಸೌಂದರ್ಯವನ್ನು ಸವಿದಿದ್ದಾರೆ.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ರಾಜಕೀಯ ಜಂಜಾಟ ಮರೆತು ಫ್ರೀ ಮೂಡ್ನಲ್ಲಿ ಮಲೆನಾಡ ಹುಡುಗರ ಜೊತೆ ಕ್ರಿಕೆಟ್ ಆಡಿದ...









