ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಶಿಫಾರಸು…

52
firstsuddi

ವಾಷಿಂಗ್ಟನ್ : ಕಳೆದ ವರ್ಷ ಯುಎಸ್ ಕ್ಯಾಪಿಟಲ್ ಮೇಲಿನ ದಾಳಿಯ ತನಿಖೆ ನಡೆಸಿದ ಕಾಂಗ್ರೆಸ್ ಸಮಿತಿಯು ತನ್ನ ವರದಿಯನ್ನು ನೀಡಿದ್ದು, ಈ ವರದಿಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಇದರಿಂದ 2024ರ ಚುನಾವಣೆಯಲ್ಲಿ ಸ್ಪರ್ಧಿಸುವ ಡೊನಾಲ್ಡ್ ಟ್ರಂಪ್ ಅವರ ಯೋಜನೆಗೆ ಹಿನ್ನಡೆಯಾಗಬಹುದು.

ದಂಗೆಯನ್ನು ಪ್ರಚೋದಿಸುವ, ಅಧಿಕೃತ ಪ್ರಕ್ರಿಯೆಗೆ ಅಡ್ಡಿಪಡಿಸುವ, ಯುಎಸ್ ಸರ್ಕಾರವನ್ನು ವಂಚಿಸುವ ಪಿತೂರಿ ಮತ್ತು ಸುಳ್ಳು ಹೇಳಿಕೆಗಳನ್ನು ನೀಡುವುದಕ್ಕಾಗಿ ಟ್ರಂಪ್ ವಿರುದ್ಧ ಇಂತಹ ಕ್ರಮವನ್ನು ತೆಗೆದುಕೊಳ್ಳುವಂತೆ ಹೌಸ್ ಪ್ಯಾನೆಲ್ ಸರ್ವಾನುಮತದಿಂದ ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿತು.

ತನಿಖೆಯ ಸಂದರ್ಭದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮ್ಮ ಸಂವಿಧಾನದ ಅಡಿಯಲ್ಲಿ ಶಾಂತಿಯುತ ಅಧಿಕಾರದ ಪರಿವರ್ತನೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಈ ಘಟನೆಯನ್ನು ಆಯೋಜಿಸಿದ್ದಾರೆ ಎಂಬುದಕ್ಕೆ ಸಮಿತಿಯು ಮಹತ್ವದ ಪುರಾವೆಗಳನ್ನು ಕಂಡುಕೊಂಡಿದೆ ಜೇಮೀ ರಾಸ್ಕಿನ್ ಹೇಳಿದ್ದಾರೆ.

ಜನವರಿ 6, 2021 ರಂದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಚುನಾವಣೆಯಲ್ಲಿ ಸೋಲಿನ ನಂತರ ಯುಎಸ್ ಸಂಸತ್ತಿನ ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆಸಿದ್ದರು.