ತರಬೇತಿ ವಿಮಾನ ಪತನ – ಇಬ್ಬರು ಪೈಲಟ್ ಸಾವು…

96
firstsuddi

ತೆಲಂಗಾಣ: ತರಬೇತಿ ವಿಮಾನ ಪತನಗೊಂಡ ಪರಿಣಾಮ ಪೈಲಟ್ ಮತ್ತು ತರಬೇತಿ ನಿರತ ಪೈಲಟ್ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ಈ ತರಬೇತಿ ವಿಮಾನವು ನಲ್ಗೊಂಡ ಜಿಲ್ಲೆಯ ಪೆದ್ದಾಪುರ ಮಂಡಲ, ತುಂಗತ್ತುರಿ ಸಮೀಪ ಅಪಘಾತಕ್ಕೀಡಾಗಿದೆ. ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.

ತರಬೇತಿ ವಿಮಾನವು ನಾಗಾರ್ಜುನ ಏರ್​ ಬೇಸ್​​ನಿಂದ ಹಾರಾಟ ಆರಂಭಿಸಿತ್ತು. ತಾಂತ್ರಿಕ ಸಮಸ್ಯೆಯಿಂದ ಅಪಘಾತ ಸಂಭವಿಸಿರಬಹುದು ಎಂದು  ಅಂದಾಜಿಸಲಾಗಿದೆ. ಮೃತರ ಕುರಿತ ಮಾಹಿತಿ ಇನ್ನೂ ತಿಳಿದುಬಂದಿಲ್ಲ.