ತಾಜ್‍ಮಹಲ್‍ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಇಬ್ಬರು ಪೊಲೀಸ್ ವಶಕ್ಕೆ…

65
firstsuddi

ಲಕ್ನೋ : ತಾಜ್ ಮಹಲ್ ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜ್ ಮಹಲ್ ನೋಡಲು ಆಗಮಿಸಿದ್ದ ವೇಳೆ ಪಾಕ್ ಪರವಾಗಿ ಘೋಷಣೆ ಕೂಗಿದ್ದಾರೆ. ತಕ್ಷಣವೇ ಇಬ್ಬರನ್ನು ಹಿಡಿದು ಥಳಿಸಿರುವ ಸ್ಥಳೀಯರು ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರಲ್ಲಿ ಒಬ್ಬ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ನಿವಾಸಿ ಸುಹೇಲ್ (19) ಎಂದು ಗುರುತಿಸಲಾಗಿದೆ.

ದೂರಿನಲ್ಲಿ ಯಾವ ಘೋಷಣೆಗಳು ಕೇಳಿಬಂದವು ಎಂಬುದನ್ನು ಉಲ್ಲೇಖಿಸಿಲ್ಲ. ಆದರೆ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿದ ಆರೋಪದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಾಜ್ ಗಂಜ್ ಪೊಲೀಸ್ ಠಾಣೆಯ ಠಾಣಾಧಿಕಾರಿ(ಎಸ್‌ಎಚ್‌ಒ) ಭೂಪೇಂದ್ರ ಸಿಂಗ್ ಬಲಿಯಾನ್ ಅವರು ತಿಳಿಸಿದ್ದಾರೆ.