ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಮಾಲೀಕ…

118
firstsuddi

ಬೆಳಗಾವಿ : ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಮಾಲೀಕ ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯ ಗೋಕಾಕ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 17ರಂದು ರಾತ್ರಿ ವೇಳೆ ಮಾಲೀಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಮನೆಯ ಎದುರು ಶೆಡ್ ನಲ್ಲಿ ಸಂತ್ರಸ್ತೆ ಕುಟುಂಬ ವಾಸವಿದ್ದರು. ಕಳೆದ ಹಲವು ವರ್ಷಗಳಿಂದ ಸಂತ್ರಸ್ತೆ ಹಾಗೂ ಆಕೆಯ ಪತಿ ಆರೋಪಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಪತಿ ಹೊರಗೆ ಹೋದಾಗ ಶೆಡ್ಗೆ ನುಗ್ಗಿದ ಜಮೀನು ಮಾಲೀಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರಕ್ಕೂ ಮುನ್ನ ಸಹಚರನನ್ನು ಶೆಡ್ ನಲ್ಲಿ ಕಾವಲಿಗಿರಿಸಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಈ ವೇಳೆ ತಡೆಯಲು ಬಂದ 5 ವರ್ಷ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಶೆಡ್ ಕಾವಲಿಗಿದ್ದ ಆರೋಪಿಯ ಸಹಚರ ಕೂಡ ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿರುವ ಸಂತ್ರಸ್ತೆ ಗೋಕಾಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಸದ್ಯ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.