ದೆಹಲಿಯ ಸಂಸತ್ ಭವನದ ಬಳಿ ಅನುಮಾನಾಸ್ಪದವಾಗಿ ಕುಳಿತಿದ್ದ ಜಮ್ಮು-ಕಾಶ್ಮೀರಾದ ಯುವಕನನ್ನು ಬಂಧಿಸಿದ ಸಿ.ಆರ್.ಪಿ.ಎಫ್ ಸಿಬ್ಬಂದಿ…

134
firstsuddi

ನವದೆಹಲಿ : ದೆಹಲಿಯ ಸಂಸತ್ ಭವನದ ಎದುರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಜಮ್ಮು ಕಾಶ್ಮೀರಾ ಮೂಲದ ಯುವಕನನ್ನು ಸಿ.ಆರ್.ಪಿ.ಎಫ್ ಸಿಬ್ಬಂದಿ ಬಂಧಿಸಿದ್ದಾರೆ. ಸಂಸತ್ ಭವನದ ಬಳಿ ಇರುವ ವಿಜಯ್ ಚೌಕ್ ಉದ್ಯಾನದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಕುಳಿತಿರುವುದನ್ನು ಗಮನಿಸಿದ ಗಸ್ತು ತಿರುಗುತ್ತಿದ್ದ ಸಿಬ್ಬಂದಿಗಳು ಯುವಕನನ್ನು ವಿಚಾರಿಸಿದ್ದು, ಈ ವೇಳೆ ಯುವಕ ಜಮ್ಮು ಕಾಶ್ಮಿರಾದ ಬದ್ಗಾಮ್ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ. ಯುವಕ ತನ್ನ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಹಿನ್ನಲೆ ಸಿಆರ್‍ಪಿಎಫ್ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವಕನ ಬಳಿ ಎರಡು ದಾಖಲೆಗಳು ಸಿಕ್ಕಿದ್ದು, ಎರಡರಲ್ಲೂ ಯುವಕನ ಹೆಸರು ಬೇರೆ ಬೇರೆ ಇದೆ. ಅಲ್ಲದೇ ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಿರುವುದರಿಂದ ಯುವಕನನ್ನು ದೆಹಲಿಯ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಯುವಕನ ಬಗ್ಗೆ ಅನುಮಾನಾಸ್ಪದ ಮಾಹಿತಿ ಕಂಡು ಬರದೇ ಇದ್ದರೆ ಯುವಕನನ್ನು ಬಿಡಲಾಗುತ್ತದೆ ಎಂದು ತಿಳಿದು ಬಂದಿದೆ.