ದೆಹಲಿ ರಣಜಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಆಯ್ಕೆ.

10

ಬಿಸಿಸಿಐನ ಕಟ್ಟುನಿಟ್ಟಿನ ಆದೇಶಕ್ಕೆ ತಲೆಬಾಗಿರುವ ಭಾರತ ತಂಡದ ಸ್ಟಾರ್ ಆಟಗಾರರು ಇದೀಗ ದೇಶೀ ಟೂರ್ನಿಯತ್ತ ಮುಖಮಾಡಿದ್ದಾರೆ. ಅದರಂತೆ ಮುಂಬರುವ ರಣಜಿ ಟ್ರೋಫಿ ಆಡುವುದಕ್ಕೆ ಎಲ್ಲಾ ಆಟಗಾರರು ತಮ್ಮ ತಯಾರಿಯನ್ನು ಆರಂಭಿಸಿದ್ದು, ಇದೀಗ ತಮ್ಮ ರಾಜ್ಯ ತಂಡಗಳ ಪರ ಬಹಳ ವರ್ಷಗಳ ನಂತರ ಅಂಕಣಕ್ಕಿಳಿಯಲಿದ್ದಾರೆ. ಇದಕ್ಕೆ ಪೂರಕವಾಗಿ ಇದೀಗ ದೆಹಲಿ ತನ್ನ ರಣಜಿ ಟ್ರೋಫಿ ತಂಡವನ್ನು ಅಂತಿಮಗೊಳಿಸಿದ್ದು, ಈ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ 13 ವರ್ಷಗಳ ನಂತರ ಕೊಹ್ಲಿ ದೆಹಲಿ ರಣಜಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಲ್ಲದೆ, ರಿಷಬ್ ಪಂತ್ ಕೂಡ ದೆಹಲಿ ತಂಡದಲ್ಲಿದ್ದು, ಅವರು ಕೂಡ ಎಂಟು ವರ್ಷಗಳ ಬಳಿಕ ಈ ಪಂದ್ಯಾವಳಿಯನ್ನು ಆಡುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಅತ್ಯಂತ ಕಿರಿಯ ಕ್ರಿಕೆಟಿಗನ ನಾಯಕತ್ವದಲ್ಲಿ ಆಡಲಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿದೆ. ದೆಹಲಿಯ ರಣಜಿ ತಂಡದ ನಾಯಕತ್ವವನ್ನು ಆಯುಷ್ ಬದೋನಿಗೆ ಹಸ್ತಾಂತರಿಸಲಾಗಿದೆ.