ಧಗಧಗನೆ ಹೊತ್ತಿ ಉರಿದ ಬಿಎಂಟಿಸಿ ಬಸ್.

95
firstsuddi

ಬೆಂಗಳೂರು : ಬಿಎಂಟಿಸಿ ಬಸ್ಸೊಂದು ಇದ್ದಕ್ಕಿದ್ದಂತೆ ಧಗಧಗನೆ ಹೊತ್ತಿ ಉರಿದ ಘಟನೆ ನಗರದ ಚಾಮರಾಜಪೇಟೆಯ ಮಕ್ಕಳಕೂಟ ಬಳಿ ನಡೆದಿದೆ.

ಸುಮಾರು 40 ಪ್ರಯಾಣಿಕರಿದ್ದ KA 57 F 1592 ನಂಬರ್ ನ ಈ ಬಸ್ ಹೊಸಕೆರೆಹಳ್ಳಿಯಿಂದ ಕೆ.ಆರ್. ಮಾರುಕಟ್ಟೆಗೆ ಬರುತ್ತಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಕಂಡಕ್ಟರ್ ಬಾಕ್ಸ್ ನಲ್ಲಿ ಇಡಲಾಗಿದ್ದ ಬಸ್ ಟಿಕೆಟ್ ಸುಟ್ಟು ಭಸ್ಮವಾಗಿವೆ. ಸದ್ಯ ಯಾವುದೇ ಸಾವು ನೋವು ಸಂಭವಿಸಿಲ್ಲ. ಬೇರೆ ಬಸ್ ಗೆ ಶಿಫ್ಟ್ ಮಾಡಿ ಪ್ರಯಾಣಿಕರನ್ನು ಕಳಿಸಲಾಗಿದೆ. ಮಿನಿ ನೀರಿನ ಟ್ಯಾಂಕರ್ ಮೂಲಕ ಬೆಂಕಿ ನಂದಿಸಲಾಗುತ್ತಿದೆ.