ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ ಪ್ರಕರಣ ದಾಖಲು – ಬಂಧನಕ್ಕಾಗಿ ಪೊಲೀಸರ ಹುಡುಕಾಟ…

67
firstsuddi

ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ ಅವರನ್ನು ಅರೆಸ್ಟ್ ಮಾಡಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಖ್ಯಾತ ರಾಜಕಾರಣಿಯೊಬ್ಬರಿಗೆ ಅಲಯನ್ಸ್ ವಿಶ್ವ ವಿದ್ಯಾಲಯ ಮಾರಿಸಲು ಸ್ವರ್ಣಲತಾ ಮುಂದಾಗಿದ್ದರು ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರು ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಮಧುಕರ್ ಅಂಗೂರ್ ಮತ್ತು ಸ್ವರ್ಣಲತಾ ಗೂಂಡಾಗಳ ಜೊತೆ ವಿವಿಗೆ ನುಗ್ಗಿ ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಸೆಪ್ಟೆಂಬರ್ 10ರಂದು ಬಂದೂಕು ಹಿಡಿದ ಗೂಂಡಾಗಳ ಜೊತೆ ವಿವಿಗೆ ನುಗ್ಗಿರುವ ಆರೋಪ ಸ್ವರ್ಣಲತಾ ಅವರ ಮೇಲಿದೆ.

ಈ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಅಲಯನ್ಸ್ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರಾ ದೂರು ನೀಡಿದ್ದಾರೆ. ಈಗಾಗಲೇ ಮಧುಕರ್ ಬಂಧನವಾಗಿದ್ದು, ಸ್ವರ್ಣಲತಾ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.