ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆ…

63
firstsuddi

ಹೈದರಾಬಾದ್ : ಸೈದಾಬಾದ್ ನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಲೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪಲ್ಲಂಕೊಂಡ ರಾಜು ಎಂಬಾತ ಶವವಾಗಿ ರೈಲ್ವೇ ಹಳಿ ಮೇಲೆ ಪತ್ತೆಯಾಗಿದ್ದಾನೆ. ರೈಲಿಗೆ ತಲೆಕೊಟ್ಟು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಆರೋಪಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ತೆಲಂಗಾಣ ಡಿಜಿಪಿ ಸ್ಪಷ್ಟನೆ ನೀಡಿದ್ದು, ಅತ್ಯಾಚಾರ ಆರೋಪಿಯ ಮೃತದೇಹ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆಯಾಗಿದೆ. ದೇಹದ ಮೇಲಿನ ಗುರುತುಗಳ ಮೂಲಕ ಆತನ ಗುರುತು ಪತ್ತೆ ಹಚ್ಚಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಏನಿದು ಪ್ರಕರಣ?
ಸೈದಾಬಾದ್ ಪ್ರದೇಶದ ಸಿಂಗರೇಣಿ ಕಾಲೋನಿಯಲ್ಲಿ ಸೆಪ್ಟೆಂಬರ್ 9 ರಂದು ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಾಲಕಿಯನ್ನು ಕೊಲೆಗೈದು ಆರೋಪಿ ಕಾಣೆಯಾಗಿದ್ದ. ಪೊಲೀಸರು ಆತನ ಪತ್ತೆಗಾಗಿ ಹುಡುಕಾಟದಲ್ಲಿದ್ದರು ಆದರೂ ಆತನ ಪತ್ತೆ ಸಾಧ್ಯವಾಗಿರಲಿಲ್ಲ. ಪೊಲೀಸರು ಈತನ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು. ಅಲ್ಲದೆ ತೆಲಂಗಾಣ ಗೃಹ ಸಚಿವರು ಆರೋಪಿಯನ್ನು ಎನ್ ಕೌಂಟರ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಆರೋಪಿ ಶವ ರೈಲು ಹಳಿಯಲ್ಲಿ ಪತ್ತೆಯಾಗಿದೆ.