ಬೆಳಗಾವಿ : ಆಭರಣ ಮಳಿಗೆಗಳ ಮೇಲೆ ಐಟಿ ದಾಳಿ…

67
firstsuddi

ಬೆಳಗಾವಿ : ಬೆಳ್ಳಂಬೆಳಗ್ಗೆ ಆಭರಣ ಮಳಿಗೆಗಳ ಮಾಲೀಕರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ನಗರದ ಖಡೇಬಜಾರ್ ನಲ್ಲಿರುವ ಪ್ರತಿಷ್ಠಿತ ಪೋತದಾರ್ ಜ್ಯುವೆಲ್ಲರ್ಸ್ ಮೇಲೆ ದಾಳಿ ಮಾಡಲಾಗಿದೆ. ಜೊತೆಗೆ ಜಾಧವ್ ನಗರದಲ್ಲಿರುವ ಪೋತದಾರ್ ಜ್ಯುವೆಲ್ಲರ್ಸ್ ಮಾಲೀಕ ಅನಿಲ್ ಪೋತದಾರ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಬಸವ ನಗರದಲ್ಲಿರುವ ಬಾಪಣಾ ಜ್ಯುವೆಲ್ಲರ್ಸ್ ಮೇಲೂ ದಾಳಿ ನಡೆಸಲಾಗಿದೆ. ಪೂಣರ್ವಿ ಜ್ಯುವೆಲ್ಲರಿ ಹಾಗೂ ಅದರ ಮಾಲೀಕರಾದ ವಿಜಯ್ ಬಾಪಣಾ ಮತ್ತು ಪುರುಷೋತ್ತಮ ಬಾಪಣಾ ಮನೆ ಮತ್ತು ಅಂಗಡಿ ಮೇಲೆ ದಾಳಿ ನಡೆಸಲಾಗಿದೆ.

ನಾಲ್ಕೂ ಕಡೆಗಳಲ್ಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ತೆರಿಗೆ ವಂಚನೆ ಸೇರಿದಂತೆ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.