ಮುಂಜಾನೆ ವಾಕಿಂಗ್‍ಗೆ ತೆರಳಿದ್ದ ವ್ಯಕ್ತಿ ಪಾರ್ಕ್‍ನಲ್ಲೇ ಕುಸಿದು ಬಿದ್ದು ಸಾವು…

192
firstsuddi

ಬೆಂಗಳೂರು : ಮುಂಜಾನೆ ವಾಕಿಂಗ್‍ಗೆ ತೆರಳಿದ್ದ ವ್ಯಕ್ತಿ ಪಾರ್ಕ್‍ನಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಆರ್.ಟಿ. ನಗರದಲ್ಲಿ ನಡೆದಿದೆ. ಇಂದು ಮುಂಜಾನೆ ವಾಕಿಂಗ್‍ಗೆಂದು ಪಾರ್ಕ್‍ಗೆ ತೆರಳಿದ್ದ ವ್ಯಕ್ತಿ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದು, ಮೃತದೆಹವನ್ನು ಬಿಬಿಎಂ ಸಿಬ್ಬಂದಿ ಕೊಂಡೊಯ್ದಿದ್ದಾರೆ. ನಗರದಲ್ಲಿ ಕೊರೊನಾ ಆತಂಕ ಹೆಚ್ಚಾಗಿರುವ ನಡುವೆ ಪಾರ್ಕ್‍ಗೆ ಬಂದ ವ್ಯಕ್ತಿ ಹೇಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿಲ್ಲ. ಇದರಿಂದ ನಗರದಲ್ಲಿ ಆತಂಕ ಹೆಚ್ಚಾಗಿದ್ದು, ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ಬಳಿಕ ಹೇಗೆ ಮೃತಪಟ್ಟಿದ್ದಾರೆ ಎಂದು ತಿಳಿಯಬೇಕಾಗಿದೆ.