ಮೂಡಿಗೆರೆ : ಶಿಕ್ಷಕರು ಸರ್ಕಾರಿ ಶಾಲಾ ಮಕ್ಕಳಲ್ಲಿ ಕೆಲಸ ಮಾಡಲು ಒತ್ತಾಯಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು : ಬಿ.ಸಿ.ಶಿವನಂಜೇಗೌಡ…

997
firstsuddi

ಮೂಡಿಗೆರೆ : ಸರ್ಕಾರಿ ಶಾಲಾ ಮಕ್ಕಳಲ್ಲಿ ಒತ್ತಾಯ ಪೂರ್ವಕವಾಗಿ ಶಾಲಾ ಆವರಣ ಹಾಗೂ ಇನ್ನಿತರ ಶೌಚಾಲಯದ ಸ್ವಚ್ಚತೆ ಸಪಾಯಿ ಕೆಲಸಗಳನ್ನು ವಿದ್ಯಾರ್ಥಿಗಳನ್ನು ಬಳಸಿಕೊಂಡು ಮಾಡಿಸುತ್ತಿದ್ದು, ಅದರಲ್ಲಿ ತಾಲ್ಲೂಕಿನ ಕೆಲವು ಶಾಲೆಗಳ ಬಗ್ಗೆ ಹಾಗೂ ಈ ಶಾಲೆಯ ಬಗ್ಗೆ ನಮಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೌಖಿಕ ದೂರು ಬಂದಿದ್ದು, ಈ ಕುರಿತು ದೂರುಗಳು ಮರುಕಳಿಸಿದ್ದಲ್ಲಿ ನಿಮ್ಮ ಬಗ್ಗೆ ಕ್ರಮಕ್ಕೆ ಸೂಚಿಸಲಾಗುವುದು ಎಂದು  ಶಿಕ್ಷಕರಿಗೆ ಕ್ಷೇತ್ರ ಸಮನ್ವಯಾಧಿಕಾರಿಯಾದಂತಹ ಬಿ.ಸಿ.ಶಿವನಂಜೇಗೌಡ ಎಚ್ಚರಿಕೆಯನ್ನು ನೀಡಿದರು.

ಸಾರ್ವಜನಿಕರಿಂದ ಬಂದಂತಹ ದೂರಿನ ಮೇರೆಗೆ ಶಾಸಕರ ಮಾದರಿ ಹಿರಿಯ ಪ್ರಾಥಾಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ತುರ್ತು ಶಿಕ್ಷಕರ ಸಭೆಯನ್ನು ಕರೆದು ಈ ವಿಚಾರದಲ್ಲಿ ನಮ್ಮ ಬಳಿ ಹಿಂದೆಯೇ ನಮಗೆ ಮೌಖಿಕವಾಗಿ ದೂರು ಬಂದಿದ್ದು, ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಮೊದಲೇ ಇಂತಹ ವಿಷಯದಲ್ಲಿ ಜಾಗೃತರಾಗಲು ತಿಳಿಸಿರುತ್ತಾರೆ. ಆದರೆ ಇನ್ನು ಮುಂದೆ ಸರ್ಕಾರಿ ಶಾಲಾ ಮಕ್ಕಳಲ್ಲಿ ಶಾಲೆಗೆ ಸಂಬಂಧಿಸಿದಂತೆ ಶೌಚ ಶುಚಿಗೊಳಿಸಲು ಹಾಗೂ ತರಕಾರಿ ಇನ್ನಿತರ ಕಷ್ಟಕರವಾದ ಕೆಲಸಗಳನ್ನು ಮಾಡಲು ಸೂಚಿಸಿದರೆ ಅಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಕರಲ್ಲಿ ತಿಳಿಸಿದರು.

ಇತ್ತೀಚಿಗೆ ಸರ್ಕಾರಿ ಶಾಲಾ ಮಕ್ಕಳಲ್ಲಿ ಶಿಕ್ಷಕರು ನಡೆದುಕೊಳ್ಳುವ ರೀತಿ ಸರಿಇಲ್ಲ ಮೊದಲು ನಾವು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಅದರಂತೆ ಇಲ್ಲಿ ಮಕ್ಕಳಿಗೆ ಸ್ವಚ್ಚತಾ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಬೇಕು. ನಂತರ ಅವರಿಂದ ಕೆಲಸ ಮಾಡಿಸಿ. ಅದನ್ನು ಬಿಟ್ಟು ಅವರನ್ನು ಅದೇ ಕೆಲಸಕ್ಕೆ ನಿರಂತರ ಬಳಸಬೇಡಿ ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಮನಸ್ಸು ಘಾಸಿಗೊಂಡು ಇದರಿಂದ ಸರ್ಕಾರಿ ಶಾಲಾ ಮಕ್ಕಳೆಂದರೆ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ ಎಂಬಂತಹ ಮನೋಭಾವ ಮಕ್ಕಳಲ್ಲಿ ಬೆಳೆಯುತ್ತದೆ ಇದರಿಂದ ಸರ್ಕಾರಿ ಶಾಲೆಯ ಕಡೆ ಮಕ್ಕಳಲ್ಲಿ ಹಾಗೂ ಅವರ ಪೋಷಕರಲ್ಲಿ ಶಾಲೆಗಳ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಇಂತಹ ಸನ್ನಿವೇಶ ಸೃಷ್ಠಿಮಾಡಿಕೊಂಡಲ್ಲಿ ಸರ್ಕಾರಿ ಶಾಲಾ ಉಳಿಸುವ ನಿಟ್ಟಿನಲ್ಲಿ ಸರ್ಕಾರ ವಿವಿದ ಕಾರ್ಯಕ್ರಮಗಳನ್ನು ರೂಪಿಸುತಿದ್ದರು ಅದನ್ನು ಪಾಲನೆ ಮಾಡುವವರಲ್ಲಿ ಮೊದಲು ಶಿಕ್ಷಕರಾದರೆ ಇದರಿಂದ ಇಲ್ಲಿ ಕಲಿತ ಮಕ್ಕಳಲ್ಲಿ ಒಂದು ಒಳ್ಳೆಯ ಸಂದೇಶ ರವಾನೆಯಾಗುತ್ತದೆ ಎಂದು ಈ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು.