ಮೈಸೂರು : ಜೀಪಿನಿಂದ ಡಿಕ್ಕಿ ಹೊಡೆಸಿ ತಾಯಿಯನ್ನೇ ಕೊಂದ ಮಗ.

88
firstsuddi

ಮೈಸೂರು : ಜೀಪಿನಿಂದ ಡಿಕ್ಕಿ ಹೊಡಿಸಿ ಹೆತ್ತ ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹನುಮಂತಪುರದಲ್ಲಿ ನಡೆದಿದೆ.

ನಾಗಮ್ಮ (65) ಹತ್ಯೆಯಾದ ಮಹಿಳೆ. ಇವರ ಮಗ ಹೇಮರಾಜ್(45) ಕೊಲೆ ಮಾಡಿದ ಆರೋಪಿ. ಹಣಕಾಸಿನ ವಿಚಾರಕ್ಕಾಗಿ ತಾಯಿ, ಮಗನ ನಡುವೆ ಪ್ರತಿನಿತ್ಯ ಗಲಾಟೆ ನಡೆಯುತ್ತಿತ್ತು. ಇದು ವಿಕೋಪಕ್ಕೆ ತಿರುಗಿದ್ದು, ಇಂದು ನಾಗಮ್ಮ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ವೇಳೆ ಹೇಮರಾಜ್ ಅವರು ಜೀಪಿನಿಂದ ಡಿಕ್ಕಿ ಹೊಡಿಸಿ ಹತ್ಯೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಭೇಟಿ ನೀಡಿ ಆರೋಪಿ ಹೇಮರಾಜ್ ನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.