ವಾಷಿಂಗ್ಟನ್ : ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧಭೂಮಿಯಲ್ಲಿ ಜಯಗಳಿಸಬಹು. ಆದರೆ ಭವಿಷ್ಯದಲ್ಲಿ ತಕ್ಕ ಬೆಲೆ ತೆರಲಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಎಚ್ಚರಿಕೆ ನೀಡಿದ್ದಾರೆ.
ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್ ಮೇಲೆ ರಷ್ಯಾ ಪೂರ್ವನಿಯೋಜಿತ ಮತ್ತು ಅಪ್ರಚೋದಿತ ದಾಳಿ ನಡೆಯುತ್ತಿದೆ. ನ್ಯಾಟೊ ದೇಶಗಳು ಉಕ್ರೇನ್ ರಕ್ಷಣೆಗೆ ಧಾವಿಸುವುದಿಲ್ಲ ಎಂದೇ ರಷ್ಯಾ ಭಾವಿಸಿಕೊಂಡಿದೆ. ಆದರೆ ನಾವು ಸುಮ್ಮನೆ ಕುಳಿತಿಲ್ಲ. ಇಡೀ ವಿಶ್ವವೇ ರಷ್ಯಾದ ನಡೆಯನ್ನು ಖಂಡಿಸಿದೆ. ಅಮೆರಿಕ ವಾಯುನೆಲೆಯಲ್ಲಿ ರಷ್ಯಾ ವಿಮಾನಗಳನ್ನು ನಿರ್ಬಂಧಿಸಲಾಗಿದೆ. ರಷ್ಯಾ ವಿರುದ್ಧ ಉಕ್ರೇನ್ ನ ಜನರು ಧೈರ್ಯವಾಗಿ ಹೋರಾಡುತ್ತಿದ್ದಾರೆ ಎಂದರು.
ನಾವು ಉಕ್ರೇನ್ ಪರ ಇರುವುದರು ನಿಜ. ಆದರೆ ರಷ್ಯಾ ವಿರುದ್ಧ ನೇರವಾಗಿ ಸಂಘರ್ಷಕ್ಕೆ ಇಳಿಯುವುದಿಲ್ಲ. ಭವಿಷ್ಯ ಏನಾಗಲಿದೆ ಎಂದು ಪುಟಿನ್ಗೆ ತಿಳಿದಿಲ್ಲ. ಕೆಲವು ನಿರ್ಬಂಧಗಳಿಂದ ರಷ್ಯಾವನ್ನು ಉಸಿರುಗಟ್ಟಿಸುತ್ತಿದ್ದೇವೆ. ಇದು ರಷ್ಯಾ ಆರ್ಥಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಮುಂಬರುವ ವರ್ಷಗಳಲ್ಲಿ ರಷ್ಯಾ ಮಿಲಿಟರಿ ದುರ್ಬಲಗೊಳ್ಳಲಿದೆ ಎಂದು ಜೋ ಬೈಡನ್ ಹೇಳಿದ್ದಾರೆ.










