ರಾಜ್ಯದಲ್ಲಿ ಪತ್ತೆಯಾಯ್ತು ಒಮಿಕ್ರಾನ್ ನ ಎರಡು ಉಪ ತಳಿ!

60
firstsuddi

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವುದನ್ನು ನೋಡಿದರೆ ರಾಜ್ಯಕ್ಕೆ 4ನೇ ಅಲೆ ಕಾಲಿಟ್ಟೇ ಬಿಡ್ತಾ ಎನ್ನುವ ಅನುಮಾನ ಕಾಡುತ್ತಿದೆ. ಇದರ ಮಧ್ಯೆ BA.4 ಹಾಗೂ BA.5 ಎಂಬ ಒಮಿಕ್ರಾನ್ ವೈರಸ್ ನ ಎರಡು ಉಪ ತಳಿಗಳು ಪತ್ತೆಯಾಗಿವೆ. 

ಒಮಿಕ್ರಾನ್ ನ BA.2 ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿತ್ತು. ಈಗ ಒಮಿಕ್ರಾನ್ ನ BA.4 ಹಾಗೂ BA.5 ಉಪತಳಿ ಪತ್ತೆಯಾಗಿದ್ದು, ಈ ಉಪತಳಿ BA.2ನ ಸೀಕ್ವೆನ್ಸ್ ಗಿಂತ ವಿಭಿನ್ನ ಎಂದು ಹೇಳಲಾಗುತ್ತಿದೆ. ಒಮಿಕ್ರಾನ್ ಸೋಂಕಿತರಿಗೂ ಮತ್ತೆ ಸೋಂಕು ತಗುಲುವ ಸಾಧ್ಯತೆ ಇದೆಯಂತೆ. ಈ ಕುರಿತು ಹೆಚ್ಚಿನ ಅಧ್ಯಯನಕ್ಕೆ ವೈರಾಲಜಿಸ್ಟ್ ಗಳು ಮುಂದಾಗಿದ್ದು, ಲಕ್ಷಣಗಳೇನು, ಎಷ್ಟು ಅಪಾಯಕಾರಿ ಎಂಬುದು ತಿಳಿಯಲಿದೆ.

ಈ ಹಿಂದೆ ಡೆಲ್ಟಾ & ಸಬ್ ಲೈನ್ಸ್- 9.8%, ಈಟಾ, ಕಪ್ಪಾ, ಪಂಗೋ- 2.4%, ಒಮಿಕ್ರಾನ್- 87.8%, BA1.1.529- 17.6%, BA1 – 1.8%, BA2- 80.6% ರಷ್ಟು ಅಪಾಯ ತಂದಿತ್ತು. ಇದೀಗ ಒಮಿಕ್ರಾನ್‌ನ BA.4 ಹಾಗೂ BA.5 ಉಪತಳಿ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.