ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ-ಬಿಜೆಪಿಯ 24 ಮಂದಿ ಶಾಸಕರಿಗೆ ಭರ್ಜರಿ ಗಿಫ್ಟ್ ನೀಡಿದ ಸಿಎಂ…

203
firstsuddi

ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ್ದು, ಈ ಸಂಭ್ರಮದ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಿಜೆಪಿ ಶಾಸಕರಿಗೆ ಭರ್ಜರಿ ಗಿಫ್ಟ್ ನೀಡಿದ್ದು, 24 ಮಂದಿ ಶಾಸಕರಿಗೆ ವಿವಿಧ ನಿಗಮ ಮತ್ತು ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ.

ಯಾರಿಗೆ ಯಾವ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ…?

1. ಅರಗ ಜ್ಞಾನೇಂದ್ರ – ಕರ್ನಾಟಕ ಗೃಹಮಂಡಳಿ
2. ಎಂ. ಚಂದ್ರಪ್ಪ- ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
3. ರಾಜುಗೌಡ – ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
4. ಎಂ ಪಿ ಕುಮಾರಸ್ವಾಮಿ – ಕರ್ನಾಟಕ ಮಾರುಕಟ್ಟೆ ಕನ್ಸಲ್ಟೆಂಟ್ ಮತ್ತು ಏಜೆನ್ಸಿಸ್ ಲಿಮಿಟೆಡ್
5. ಎಎಸ್ ಪಾಟೀಲ್ ನಡಹಳ್ಳಿ – ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
6. ಎಚ್.ಹಾಲಪ್ಪ- ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್
7. ಮಾಡಾಳ್ ವಿರೂಪಾಕ್ಷಪ್ಪ – ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ
8. ತಿಪ್ಪಾರೆಡ್ಡಿ – ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
9. ಶಿವನಗೌಡ ನಾಯಕ್ – ರಸ್ತೆ ಅಭಿವೃದ್ಧಿ ನಿಗಮ ನಿಯಮಿತ
10. ಕಳಕಪ್ಪ ಬಂಡಿ – ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
11. ಪರಣ್ಣ ಮುನವಳ್ಳಿ- ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
12. ಸಿದ್ದು ಸವದಿ – ಕರ್ನಾಟಕ ಕೈಮಗ್ಗ, ಅಭಿವೃದ್ಧಿ ನಿಗಮ ನಿಯಮಿತ
13. ಪ್ರೀತಮ್ ಜಿ ಗೌಡ – ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ
14. ರಾಜ್ಕುಮಾರ್ ಪಾಟೀಲ್ ತೇಲ್ಕೂರ್ – ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಕಲಬುರಗಿ
15. ದತ್ತಾತ್ರೇಯ ಪಾಟೀಲ್ ರೇವೂರ – ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ
16. ಶಂಕರ್ ಪಾಟೀಲ್ ಮುನೇನಕೊಪ್ಪ – ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ
17. ಎಚ್ ನಾಗೇಶ್ – ಕರ್ನಾಟಕ ತೆಂಗಿನ ನಾರಿನ ಅಭಿವೃದ್ಧಿ ನಿಗಮ
18. ಎಸ್ ವಿ ರಾಮಚಂದ್ರ – ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ
19. ನೆಹರೂ ಓಲೇಕಾರ್ – ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
20. ಐಹೊಳೆ ದುರ್ಯೋಧನ – ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
21. ಲಾಲಾಜಿ ಆರ್ ಟಂಡನ್ – ರಾಜ್ಯ ಹಿಂದುಳಿದ ವರ್ಗಗಳ ಆಯೋಗ
22. ಬಸವರಾಜ ದಡೇಸೂರ್ – ರಾಜ್ಯ ಸಮಾಜ ಕಲ್ಯಾಣ ಅಭಿವೃದ್ಧಿ ಮಂಡಳಿ
23. ಡಾ.ಎಸ್.ಶಿವರಾಜ್ ಪಾಟೀಲ್ – ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ
24. ಸಿ.ಎಸ್.ನಿರಂಜನ್ ಕುಮಾರ್ – ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ