ಲಾರಿಗೆ ಮಿನಿ ಬಸ್ ಡಿಕ್ಕಿ – ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವ ದಹನ…

110
Firstsuddi

ಬಾಗಲಕೋಟೆ : ಲಾರಿಗೆ ಡಿಕ್ಕಿ ಹೊಡೆದು ಮಿನಿ ಲಕ್ಸುರಿ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಸಜೀವ ದಹನವಾದ ಘಟನೆ ಬಾಗಲಕೋಟೆಯ ಉತ್ತೂರು ಬಳಿ ಮುಧೋಳ-ಯಾದವಾಡ ರಸ್ತೆಯಲ್ಲಿ ನಡೆದಿದೆ.

ಲಾರಿ ಹಾಗೂ ಮಿನಿ ಬಸ್ ಮುಖಾಮಖಿ ಡಿಕ್ಕಿ ಹೊಡೆದ ರಬಸಕ್ಕೆ ಬಸ್ ಪಲ್ಟಿ ಆಗಿದೆ. ಬಳಿಕ ಬಸ್‍ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಭಯಗೊಂಡ ಪ್ರಯಾಣಿಕರು ಬಸ್‍ನಿಂದ ಇಳಿದಿದ್ದಾರೆ.

ನಂತರ ನೋಡ ನೋಡುತ್ತಿದಂತೆ ಬಸ್ ಹೊತ್ತಿ ಉರಿದಿದ್ದು, ಅಪಘಾತದಲ್ಲಿ ಇಬ್ಬರು ಸಜೀವ ದಹನ ಆಗಿದ್ದಾರೆ. ಮೃತರನ್ನು ಈರವ್ವ ಗಾಣೀಗೇರ(70) ಮತ್ತು ಅಣ್ಣವ್ವ ಗಾಣೀಗೇರ(58) ಎಂದು ಗುರುತಿಸಲಾಗಿದೆ.