ಶಾಲೆಗಳ ಹೆಚ್ಚುವರಿ ಶುಲ್ಕ ವಾಪಾಸ್‍ಗೆ ಆದೇಶ…

64
firstsuddi

ಬೆಂಗಳೂರು : 2020-21ನೇ ಸಾಲಿನಲ್ಲಿ ಖಾಸಗಿ ಶಾಲೆಗಳು ಪೂರ್ಣ ಶುಲ್ಕ ಪಡೆದಿದ್ದರೆ ಹೆಚ್ಚುವರಿಯಾಗಿ ಪಡೆದ ಶುಲ್ಕವನ್ನು ಪೋಷಕರಿಗೆ ವಾಪಾಸ್ ಮಾಡುವಂತೆ ಸರ್ಕಾರ ಆದೇಶ ನೀಡಿದೆ.

2020-21ನೇ ಸಾಲಿನ ಶೇ.30ರಷ್ಟು ಶುಲ್ಕ ಕಡಿತ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಿತ್ತು. ಈ ಬಗ್ಗೆ ತೀರ್ಪು ನೀಡಿದ ಹೈಕೋರ್ಟ್ ಶುಲ್ಕ ಪರಿಷ್ಕರಿಸಿ ಬೋಧನ ಶುಲ್ಕದಲ್ಲಿ ಶೇ.15ರಷ್ಟು ಪಡೆದುಕೊಳ್ಳುವಂತೆ ಆದೇಶಿಸಿದೆ.

ವಾರ್ಷಿಕ ಶುಲ್ಕ ಕಡಿಮೆ ಮಾಡುವಂತೆ ಪೋಷಕರ ಸಂಘಟನೆ ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಇದೀಗ ಹೈಕೋರ್ಟ್ ಆದೇಶದಂತೆ ಸರ್ಕಾರ ಅಧಿಕೃತವಾಗಿ 2020-21ನೇ ಸಾಲಿನ ಶುಲ್ಕ ಆದೇಶ ಪ್ರಕಟ ಮಾಡಿದೆ. ಆ ಮೂಲಕ ಬೋಧನ ಶುಲ್ಕದಲ್ಲಿ ಶೇ.15ರಷ್ಟು ಪಡೆಯಲು ಆದೇಶಿಸಿದೆ.

ಈಗಾಗಲೇ ಪೋಷಕರು ಪೂರ್ತಿ ಶುಲ್ಕ ಪಾವತಿಸಿದ್ದಲ್ಲಿ ಹೆಚ್ಚುವರಿಯಾಗಿ ಪಡೆದ ಶುಲ್ಕ ವಾಪಸ್ ನೀಡಬೇಕು ಅಥವಾ ಮುಂದಿನ ವರ್ಷಕ್ಕೆ ಅದನ್ನು ಸರಿದೂಗಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಶಾಲೆಗಳಿಗೆ ಷರತ್ತು ಹಾಕಿತ್ತು. 2020-21ನೇ ಸಾಲಿಗೆ ಮತ್ತಷ್ಟು ಶುಲ್ಕ ಕಡಿಮೆ ಮಾಡಲು ಶಾಲೆಗಳು ಒಪ್ಪಿದರೆ ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಹಾಗೂ ಪೋಷಕರಿಗೆ ಶುಲ್ಕ ಪಾವತಿ ಮಾಡಲು ಎರಡು ಕಂತು ನೀಡಬೇಕು ಎಂದು ರಾಜ್ಯ ಸರ್ಕಾರದಿಂದ ಷರತ್ತು ವಿಧಿಸಿ ಆದೇಶ ಹೊರಡಿಸಲಾಗಿತ್ತು.