ಸಾರ್ವಜನಿಕವಾಗಿ ಗಣೇಶ ವಿಗ್ರಹ ಇಡುವ ವಿಚಾರದಲ್ಲಿ ಆಯಾ ಜಿಲ್ಲಾಧಿಕಾರಿಗಳೇ ತೀರ್ಮಾನ ತೆಗೆದುಕೊಳ್ಳಬೇಕು : ಸರ್ಕಾರ ಸೂಚನೆ…

172
firstsuddi

ಬೆಂಗಳೂರು : ಸಾರ್ವಜನಿಕ ಗಣೇಶ ವಿಗ್ರಹ ಇಡುವ ವಿಚಾರದಲ್ಲಿ ಆಯಾ ಜಿಲ್ಲಾಧಿಕಾರಿಗಳೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.

ಗಣೇಶ ವಿಗ್ರಹ ಇಡುವ ವಿವಾರಕ್ಕೆ ಸಂಬಂಧಿಸಿದಂತೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಭಕ್ತಾಧಿಗಳು ಸಾರ್ವಜನಿಕವಾಗಿ ಇಡುವ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮಣ್ಣಿನ ಮೂರ್ತಿಗಳನ್ನು ಟೆಂಟ್ ಹೌಸ್‍ನಲ್ಲಿ ಇಟ್ಟು ಪೂಜೆ ಸಲ್ಲಿಸುವ ಕುರಿತು ಅನುಮತಿ ಕೋರುತ್ತಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಯವರು ಹೊರಡಿಸಿರುವ ಸುತ್ತೋಲೆಗಳು ಭಕ್ತಾಧಿಗಳು ಸಾರ್ವಜನಿಕವಾಗಿ ಗೌರಿ ಗಣೇಶ ಮೂರ್ತಿಗಳನ್ನು ಇಟ್ಟು ಹಬ್ಬ ಆಚರಿಸುವ ಸಂಬಂಧ ಸ್ಥಳೀಯವಾಗಿ ಪರಿಶೀಲಿಸಿ, ಆಯಾ ಜಿಲ್ಲಾಧಿಕಾರಿಗಳ ಹಂತದಲ್ಲಿ ಪರವಾನಿಗೆ ನೀಡಲು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ತಿಳಿಸಿದ್ದಾರೆ.