ಹಾಸನ : ಅಪರಿಚಿತ ಯುವತಿಯ ಹತ್ಯೆ ಪ್ರಕರಣ ಆರೋಪಿಯನ್ನು ಬಂಧಿಸಿದ ಹಿರೀಸಾವೆ ಪೊಲೀಸರು…

235
firstsuddi

ಹಾಸನ : ಅಪರಿಚಿತ ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೀಸಾವೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಜುಲೈ 23ರಂದು ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಬಳಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಆರೋಪಿ ಶ್ರೀನಿವಾಸ್ ಎಂಬುವವರು ಮದುವೆಯಾಗಿ ಎರಡು ಮಕ್ಕಳಿದ್ದರೂ ತನ್ನ ಪತ್ನಿಯ ಸಹೋದರನ ಮಗಳು ಚಿತ್ರಾ(23) ಎಂಬುವವರನ್ನು ಪ್ರೀತಿಸುವ ನಾಟಕವಾಡಿದ್ದು, ಇಬ್ಬರ ನಡುವಿನ ಪ್ರೀತಿಯಿಂದ ಯುವತಿ ಗರ್ಭಿಣಿಯಾದ ಸುದ್ದಿಯನ್ನು ತಿಳಿದ ಆರೋಪಿ ಯುವತಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿ ರಾಷ್ಟ್ರೀಯ ಹೆದ್ದಾರಿ 75ರ ಸಮೀಪದ ತೋಪಿನಲ್ಲಿ ಮೃತದೇಹವನ್ನು ಎಸೆದು ಪರಾರಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಮೃತದೇಹದ ಫೋಟೋ ನೋಡಿದ ಪೋಷಕರು ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಯುವತಿಯ ಕಾಲ್ ಡೀಟೈಲ್ಸ್ ಆಧರಿಸಿ ಆರೋಪಿ ಶ್ರೀನಿವಾಸ್ ಅವರನ್ನು ಬಂಧಿಸಿದ್ದಾರೆ.