ಹುಬ್ಬಳ್ಳಿ : ರೈಲಿನಲ್ಲಿ 1.12 ಲಕ್ಷ ರೂ.ಮೌಲ್ಯದ 15 ಕೆ.ಜಿ ಗಾಂಜಾ ಪತ್ತೆ…

59
firstsuddi

ಹುಬ್ಬಳ್ಳಿ : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಪ್ರಯಾಣಿಕನೋರ್ವ ಬಿಟ್ಟುಹೋದ ಬ್ಯಾಗ್ ನಲ್ಲಿ ಬರೋಬ್ಬರಿ 1.12 ಲಕ್ಷ ರೂ . ಮೌಲ್ಯದ 15 ಕೆ.ಜಿ ಗಾಂಜಾ ಪತ್ತೆಯಾಗಿದೆ

ಶನಿವಾರ ಗುಂತಕಲ್ ರೈಲು ನಿಲ್ದಾಣದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ, ಅಮರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಪರಿಚಿತ ಪ್ರಯಾಣಿಕ ರೈಲಿನಲ್ಲಿಯೇ ಬ್ಯಾಗ್ ಬಿಟ್ಟು ಇಳಿದಿದ್ದನು. ಈ ವೇಳೆ ಕರ್ತವ್ಯ ನಿರತ ಟಿಟಿಐ ಬ್ಯಾಗ್ ಮಾಲೀಕರು ಬರದಿದ್ದಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶ್ವಾನದಳದ ಮೂಲಕ ಪರಿಶೀಲನೆ ನಡೆಸಲಾಗಿದೆ.  ಬಳಿಕ ಪೊಲೀಸರು ಹಾಗೂ ರೈಲ್ವೆ ಸಿಬ್ಬಂದಿ ಬ್ಯಾಗ್ ತೆರೆದು ನೋಡಿದಾಗ ಹಸಿ ಗಾಂಜಾ ಪತ್ತೆಯಾಗಿದೆ. ಸದ್ಯ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.