ಅಂಬೇಡ್ಕರ್‌ರನ್ನು ಕಾಂಗ್ರೆಸ್ ಪ್ರತಿಯೊಂದು ಹೆಜ್ಜೆಯಲ್ಲೂ ವಿರೋಧಿಸಿದೆ: ಛಲವಾದಿ ನಾರಾಯಣಸ್ವಾಮಿ.

29

ಬೆಳಗಾವಿ: ಅಮಿತ್ ಶಾ ಅವರು ಏನು ತಪ್ಪು ಮಾಡಿದ್ದಾರೆಂದು ಕಾಂಗ್ರೆಸ್ ಹೇಳಬೇಕು. ಅಮಿತ್ ಶಾ ಅವರು ಕಾಂಗ್ರೆಸ್ ದಲಿತ ವಿರೋಧಿ, ಸಂವಿಧಾನ ವಿರೋಧಿ, ಅಂಬೇಡ್ಕರ್ ಅವರ ವಿರೋಧಿ ಎನ್ನುವಂತದನ್ನು ಹೇಳಿದ್ದಾರೆ” ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಕಾಂಗ್ರೆಸ್‍ನವರು ವೋಟ್ ಬ್ಯಾಂಕ್ ಮಾಡಲು ಅಂಬೇಡ್ಕರ್ ಅವರ ಹೆಸರನ್ನು ಒಂದು ರೀತಿಯ ಪ್ಯಾಶನ್ ಆಗಿ ಬಳಸುತ್ತಿದ್ದಾರೆ. ಮಾತಿನಲ್ಲಿ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುತ್ತಾರೆ. ಆದರೆ ಅವರಿಗೆ ಮೋಸ ಮಾಡಿದ್ದು, ಅನ್ಯಾಯ ಮಾಡಿದ್ದು, ಅವರಿಗೆ ನೋವುಂಟು ಮಾಡಿದ್ದು ಕಾಂಗ್ರೆಸ್ ಅಂತ ಅಮಿತ್ ಶಾ ಹೇಳಿದ್ದಾರೆ. ಬರಿ ಬಿಲ್‍ಪಾಸ್ ಮಾಡುವುದರಲ್ಲೇ ಈ ಸರ್ಕಾರ ಮುಂದಾಗಿದೆ. ಇದನ್ನು ಬೆಂಗಳೂರಿನಲ್ಲೇ ಮಾಡಬಹುದಿತ್ತು. ಬರಿ ಲೂಟಿ ಮಾಡುವುದೇ ಕೆಲಸ ಆಗಿದೆ. ಜನಗಳ ಜಾತ್ರೆಯನ್ನು ಮಾಡಿಸಿದ್ದಾರೆ. ಅಧಿವೇಶನವನ್ನು ಪಿಕ್‍ನಿಕ್ ರೀತಿ ಮಾಡಿಸಿದ್ದಾರೆ. ಸರ್ಕಾರ ಜನರ ಸಮಸ್ಯೆ ಬಗೆಹರಿಸಿಲ್ಲ. ಯಾವುದೇ ಸಮಸ್ಯೆಗೆ ಪರಿಹಾರ ಕೊಟ್ಟಿಲ್ಲ” ಎಂದು ತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು.