ದುಬೈ : ಇಂದಿನಿಂದ ವಿಶ್ವಕಪ್ ಸೂಪರ್ 12 ಆರಂಭವಾಗಲಿದ್ದು, ಬಲಿಷ್ಠ ದಿಗ್ಗಜರಿಂದ ಕೂಡಿರುವ ಉಭಯ ತಂಡಗಳ ಕಾದಾಟಕ್ಕೆ ದುಬೈಯ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಲಿದೆ.
ಇಂದು ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿದೆ. ಮೊದಲ ಪಂದ್ಯದಲ್ಲೇ ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಎರಡು ತಂಡಗಳು ಕಾದಾಡಲಿದ್ದು, ಪಂದ್ಯ ಮಧ್ಯಾಹ್ನ 3:30ಕ್ಕೆ ಅಬುದಾಬಿಯಲ್ಲಿ ಆರಂಭವಾಗಲಿದೆ.
ಇನ್ನು ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿದೆ. ವಿಂಡೀಸ್ ತಂಡಕ್ಕೆ ಹೋಲಿಸಿದರೆ ಇಂಗ್ಲೆಂಡ್ ಬಲಿಷ್ಠವಾಗಿದ್ದು, ಆಂಗ್ಲರ ಸವಾಲನ್ನು ವೆಸ್ಟ್ ಇಂಡೀಸ್ ಎದುರಿಸಲಿದ್ದಾರೆ. ಪಂದ್ಯ ಸಂಜೆ 7:30ಕ್ಕೆ ದುಬೈನಲ್ಲಿ ಆರಂಭವಾಗಲಿದೆ.










