ಚಿಕ್ಕಮಗಳೂರು : ಈಚಲು ಮರದಲ್ಲಿ ವಿಘ್ನೇಶ್ವರನ ಮೂರ್ತಿ ಉದ್ಭವವಾಗಿದ್ದು, ಈ ಗಣಪನನ್ನು ಕಂಡು ಕಾಫಿನಾಡಿನ ಜನ ಮೂಕವಿಸ್ಮಿತರಾಗಿದ್ದಾರೆ.

ನಗರದ ಬೈಪಾಸ್ ರಸ್ತೆಯ ಪಟಾಕಿ ಗ್ರೌಂಡ್ ಪಕ್ಕದ ಹೊಲವೊಂದರಲ್ಲಿನ ಈಚಲು ಮರದಲ್ಲಿ ಗಣಪನ ಆಕಾರ ಮೂಡಿದೆ. ಅದು ನೋಡಲು ಗಣಪತಿಯಂತೆಯೇ ಭಾಸವಾಗುತ್ತಿದೆ. ಕಣ್ಣು, ಕಿವಿ, ಸೊಂಡಿಲು, ಮುಖದ ಆಕಾರ ಸಂಪೂರ್ಣ ಗಣಪತಿಯನ್ನೇ ಹೋಲುತ್ತಿದೆ. ಹಾಗಾಗಿ, ದಿನಕ್ಕೆ ನೂರಾರು ಭಕ್ತರು ನಾ ಮುಂದು ತಾ ಮುಂದು ಅಂತ ಗಣಪನಿಗೆ ಪೂಜೆ ಸಲ್ಲಿಸಿ ಕಷ್ಟಗಳ ನಿವಾರಿಸೋ ಈಚಲ ವಿಘ್ನೇಶ ಎಂದು ಬೇಡಿಕೊಳ್ಳುತ್ತಿದ್ದಾರೆ.
ಈಗಾಗಲೇ ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿವೆ. ಅವೆಲ್ಲವೂ ಕೂಡ ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದರೆ, ಈ ಈಚಲು ಮರದ ಉದ್ಭವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿ ಹುಟ್ಟಿರೋದು ಕುತೂಹಲಕ್ಕೆ ಕಾರಣವಾಗಿದೆ.










