ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿ ಆಚರಣೆ…

77
firstsuddi

ಹುಬ್ಬಳ್ಳಿ : ಇಲ್ಲಿನ ಈದ್ಗಾ ಮೈದಾನದಲ್ಲಿ ಶ್ರೀರಾಮಸೇನೆ ವತಿಯಿಂದ ಕನಕದಾಸ ಜಯಂತಿ ಆಚರಣೆ ಮಾಡಲಾಯಿತು.

ನಿನ್ನೆ ಇದೇ ಮೈದಾನದಲ್ಲಿ ಎಐಎಂಐಎಂ ಕಾರ್ಯಕರ್ತರು ಟಿಪ್ಪು ಜಯಂತಿಯನ್ನು ಆಚರಿಸಿದ್ದರು. ಈ ಬೆನ್ನಲ್ಲೇ ಇಂದು ಶ್ರೀರಾಮಸೇನೆ ಸೇರಿದಂತೆ ಕೆಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿಯನ್ನು ಶಾಂತಿಯುತವಾಗಿ ಆಚರಿಸಿದರು.

ಜಯಂತಿ ಆಚರಣೆಗೆ ಕೇವಲ 1 ಗಂಟೆ ಅವಕಾಶ ನೀಡಲಾಗಿತ್ತು. ಅಲ್ಲದೆ ಈ ಹಿಂದಿನಂತೆ ಮೈದಾನದ ನಡುವೆ ಪರದೆಯನ್ನು ಕಟ್ಟಲಾಗಿತ್ತು. ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಇದಕ್ಕೂ ಮುನ್ನ ಮುತಾಲಿಕ್ ನಿನ್ನೆ ಟಿಪ್ಪು ಜಯಂತಿ ಮಾಡಿದ್ದ ಸ್ಥಳದಲ್ಲಿ ಗೋ ಮೂತ್ರ ಸಿಂಪಡಣೆ ಮಾಡಿ ಸ್ಥಳ ಶುದ್ಧೀಕರಣ ಮಾಡಿದರು.