ಬೆಂಗಳೂರು : 2022ರ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.
ಮಾರ್ಚ್ 28 ರಿಂದ ಏಪ್ರಿಲ್ 11 ವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಸಮಯ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45. ಪ್ರತಿ ಪ್ರಶ್ನೆ ಪತ್ರಿಕೆ ಓದಲು ವಿದ್ಯಾರ್ಥಿಗಳಿಗೆ 15 ನಿಮಿಷ ನಿಗದಿ ಮಾಡಲಾಗಿದೆ. ಹಳೆಯ ಮಾದರಿಯಲ್ಲೇ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ವೇಳಾಪಟ್ಟಿ ಹೀಗಿದೆ:
ಮಾರ್ಚ್ 28 – ಪ್ರಥಮ ಭಾಷೆ ವಿಷಯಗಳು
ಮಾರ್ಚ್ 30 – ದ್ವೀತಿಯ ಭಾಷೆ
ಏಪ್ರಿಲ್ 1 – ಕೋರ್ ಸಬ್ಜೆಕ್ಟ್ – ಅರ್ಥಶಾಸ್ತ್ರ
ಏಪ್ರಿಲ್ 4 – ಗಣಿತ
ಏಪ್ರಿಲ್ 6 – ಸಮಾಜ ವಿಜ್ಞಾನ
ಏಪ್ರಿಲ್ 8 – ತೃತೀಯ ಭಾಷೆ ವಿಷಯಗಳು
ಏಪ್ರಿಲ್ 11 – ವಿಜ್ಞಾನ










