ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ…

63
firstsuddi

ಬೆಂಗಳೂರು : ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪೊಲೀಸ್ ಪದಕ ಘೋಷಣೆ ಆಗಿದೆ. ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಗಣರಾಜ್ಯೋತ್ಸವದಂದು ನೀಡಲಾಗುವ 2022 ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 19 ಮಂದಿ ಪೊಲೀಸರು ಭಾಜನರಾಗಿದ್ದಾರೆ.

ಇನ್ನೂ ದೇಶದ 939 ಪೊಲೀಸ್ ಸಿಬ್ಬಂದಿ ಈ ಬಾರಿ ವಿಶೇಷ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಎಲ್ಲ ಅಧಿಕಾರಿಗಳು ರಾಜ್ಯಪಾಲರಿಂದ ಗೌರವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಗುಪ್ತಚರ ಇಲಾಖೆಯ ಎ.ಡಿ.ಜಿ.ಪಿ ಬಿ.ದಯಾನಂದ್, ಕ್ರೈಂ & ಟೆಕ್ನಿಕಲ್ ಸರ್ವಿಸ್ ಎಡಿಜಿಪಿ ಆರ್.ಹಿತೇಂದ್ರ, ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ, ಕೆ.ಎಸ್.ಆರ್.ಪಿ 5ನೇಯ ಬೆಟಾಲಿಯನ್ ಕಮಾಂಡೆಂಟ್ ರಾಮಯ್ಯ ಜನಾರ್ಧನ್, ಹಲಸೂರು ಉಪವಿಭಾಗ ಎ.ಸಿ.ಪಿ ಡಿ.ಕುಮಾರ್, ಹುಣಸೂರು ಉಪವಿಭಾಗದ ಡಿ.ಎಸ್.ಪಿ ಪ್ರಭುದೇವ್ ರವಿಪ್ರಸಾದ್, ಸಿಂಧನೂರು ಡಿ.ಎಸ್.ಪಿ ವೆಂಕಟಪ್ಪ ನಾಯಕ ಓಲೇಕರ್, ಆನೇಕಲ್ ಉಪವಿಭಾಗದ ಡಿ.ಎಸ್.ಪಿ, .ಎಂ ಮಲ್ಲೇಶಯ್ಯ, ಸಿ.ಐ. ಡಿ ಸೈಬರ್ ಕ್ರೈಂ ಯಶವಂತಕುಮಾರ್, ಕಲಬುರಗಿ ಸಿ.ಸಿ.ಆರ್.ಬಿ ಎ.ಸಿ.ಪಿ ಗಂಗಾಧರ್ ಮಠಪತಿ, ಕರ್ನಾಟಕ ಲೋಕಾಯುಕ್ತದ ಡಿ.ಎಸ್.ಪಿ ಕೆ.ಎಂ.ರಮೇಶ್, ಸಿ.ಐ.ಡಿ ಡಿ.ಎಸ್.ಪಿ ಎಸ್. ಬಿ.ಕೆಂಪಯ್ಯ, ಲೋಕಾಯುಕ್ತ ಇನ್ ಸ್ಪೆಕ್ಟರ್ ಎಸ್ ಕೃಷ್ಣಮೂರ್ತಿ, ಬೆಂಗಳೂರಿನ ಕೆಎಸ್ ಆರ್ ಪಿ 1ನೇ ಬೆಟಾಲಿಯನ್ ನ ಸಿ ಎಸ್ ಸಿಂಪಿ, ಬೆಳಗಾವಿ ಡಿ.ಎ.ಆರ್. ಎ.ಆರ್.ಎಸ್ ಐ ಮಹಮ್ಮದ್ ಹನೀಫ್, ಬೆಂಗಳೂರು ಸಿ.ಪಿ ಕಚೇರಿಯ ಎ.ಎಸ್.ಐ ಎಂ ಹೆಚ್ ರೇವಣ್ಣ ಸೇರಿ 19 ಮಂದಿ ರಾಷ್ಟ್ರಪತಿ ಪೊಲೀಸ್ ಪದಕಕ್ಕೆ ಭಾಜನರಾಗಿದ್ದಾರೆ.