ಐದನೇ ಟೆಸ್ಟ್ ನಿಂದ ರೋಹಿತ್ ಶರ್ಮಾ ಹೊರಗೆ.

35

ಭಾರತ-ಆಸ್ಟ್ರೇಲಿಯಾ ಟೀಮ್‍ಗಳ ಮಧ್ಯೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಇವತ್ತಿನಿಂದ ಸಿಡ್ನಿಯಲ್ಲಿ ನಡೆಯುತ್ತಿದೆ. ಸರಣಿಯಲ್ಲಿ ಸತತವಾಗಿ ವೈಫಲ್ಯ ಪ್ರದರ್ಶಿಸಿ ತಂಡಕ್ಕೆ ಹೊರೆಯಾಗಿದ್ದ ರೋಹಿತ್ ಶರ್ಮಾ ಪಂದ್ಯದಿಂದ ಹೊರ ಉಳಿದಿದ್ದಾರೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಕ್ಯಾಪ್ಟನ್ ಜವಾಬ್ದಾರಿಯನ್ನು ನೀಡಲಾಗಿದೆ. ಟೀಂ ಇಂಡಿಯಾ 2 ಬದಲಾವಣೆಗಳೊಂದಿಗೆ ಅಂಕಣಕ್ಕಿಳಿದಿದೆ. ಯುವ ಬ್ಯಾಟರ್ ಶುಭಮನ್ ಗಿಲ್‍ಗೆ ರೋಹಿತ್ ಶರ್ಮಾ ಬದಲು ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್ ರಾಹುಲ್ ಓಪನರ್ ಆಗಿ ಬ್ಯಾಟಿಂಗ್‍ಗಿಳಿದು ವಿಕೆಟ್ ಒಪ್ಪಿಸಿದ್ದಾರೆ. ಮತ್ತೊಂದು ಕಡೆ, ಬೆನ್ನು ನೋವಿನಿಂದ ಬಳಲುತ್ತಿರುವ ಆಕಾಶ್ ದೀಪ್ ಅವರ ಸ್ಥಾನವನ್ನು ಕರ್ನಾಟಕದ ಯುವ ವೇಗಿ ಪ್ರಸಿದ್ಧ ಕೃಷ್ಣನವರು ತುಂಬಿದ್ದಾರೆ. ಪಂದ್ಯಕ್ಕೂ ಮುನ್ನ ಮಾತನಾಡಿದ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ ಅವರೇ ನಮ್ಮ ಕ್ಯಾಪ್ಟನ್. ಆದರೆ ಇಂದಿನ ಟೆಸ್ಟ್ ಪಂದ್ಯವನ್ನು ಅವರು ಆಡದಿರಲು ನಿರ್ಧರಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ನಮ್ಮ ತಂಡದಲ್ಲಿ ಒಗ್ಗಟ್ಟಿದೆ ಎಂದು ಹೇಳಿದರು. ರೋಹಿತ್ ಶರ್ಮಾ, ಟೆಸ್ಟ್ ಸರಣಿಯ ಮಧ್ಯದಲ್ಲೇ ಹೊರಬಿದ್ದ ಮೊದಲ ಭಾರತೀಯ ನಾಯಕ ಎಂಬ ಕೆಟ್ಟ ಹೆಸರು ಬರೆದಿದ್ದಾರೆ.