ಕಳಸ : ಗ್ರಾ.ಪಂ ವ್ಯಾಪ್ತಿಯಲ್ಲಿ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಕೊಡದಿದಲ್ಲಿ ದಂಡ ಹಾಕಲಾಗುತ್ತದೆ : ಕವೀಶ್.

140
firstsuddi

ಕಳಸ : ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಕೊಡದಿದಲ್ಲಿ ಅಂತರ ಮೇಲೆ ದಂಡ ಹಾಕಲಾಗುತ್ತದೆ ಎಂದು ಕಳಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್ ತಿಳಿಸಿದ್ದಾರೆ.
ಶುಕ್ರವಾರ ಕಳಸ ಗ್ರಾಮ ಪಂಚಾಯಿತಿ ಮತ್ತು ಜೆಸಿಐ ಕಳಸ ಇವರ ಆಶ್ರಯದಲ್ಲಿ ಕಳಸ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಹಸಿ ಕಸ ಮತ್ತು ಒಣ ಕಸಗಳನ್ನು ವಿಂಗಡಣೆ ಮಾಡಿಕೊಡುವ ಮತ್ತು ಬಿತ್ತಿ ಪತ್ರಗಳನ್ನು ನೀಡಿ ಜಾಗೃತಿ ಮಾಡುವ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ನಮ್ಮ ಮನೆಯ ಕಸದ ಸೂಕ್ತ ವಿಲೇವಾರಿ ನಾಗರೀಕರ ಆದ್ಯ ಕರ್ತವ್ಯವಾಗಿದ್ದು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಹಸಿ ಮತ್ತು ಒಣ ಕಸ ವಿಂಗಡಿಸಿ ನೀಡಬೇಕು.ಪಂಚಾಯಿತಿ ನೀಡಿದ ಹಸಿರು ಬಕೇಟಿನಲ್ಲಿ ಹಸಿ ಕಸವನ್ನು,ಒಣ ಕಸವನ್ನು ನೀಲಿ ಬಕೇಟ್ ನಲ್ಲಿ ಕಡ್ಡಾಯವಾಗಿ ನೀಡಬೇಕು.
ಅಡುಗೆ ಮನೆ ತ್ಯಾಜ್ಯ, ತರಕಾರಿ, ಹಣ್ಣಿನ ಸಿಪ್ಪೆಗಳು, ಬೇಯಿಸಿದ ಆಹಾರ, ಚಿಕನ್, ಮೀನು ಮಾಂಸದ ಮೂಳೆಗಳು, ಮೊಟ್ಟೆಯ ಕವಚ, ಒಣಗಿದ ಹಣ್ಣು ಕಾಫಿ, ಟೀ ಪುಡಿಯ ಚರಟ ಇತ್ಯಾದಿಗಳನ್ನು ಹಸಿ ಕಸವನ್ನಾಗಿ ನೀಡಬೇಕು.
ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಕಪ್, ಹಾಲು ಅಥವಾ ಮೊಸರಿನ ಪ್ಯಾಕೇಟ್, ದಿನ ಪತ್ರಿಕೆಗಳು, ನಿಯತಕಾಲಿಕೆಗಳು, ದಿನಸಿ ವಸ್ತುಗಳು, ಕಾರ್ಡ್ ಬೋರ್ಡ್‍ಗಳು, ಟೆಟ್ರಾ ಪ್ಯಾಕೇಟ್, ಪೇಪರ್ ಕಪ್, ಪಾತ್ರೆ ಪಗಡೆ, ಗಾಜು, ಬಾಟಲ್, ರಬ್ಬರ್, ಥರ್ಮಕೋಲ್, ಶೃಂಗಾರ ಸಾದನ ಇತ್ಯಾಧಿಗಳನ್ನು ಒಣ ಕಸವನ್ನಾ ವಿಂಗಡಿಸಿ ನೀಡಬೇಕು. ಕಸವನ್ನು ಎಲ್ಲಂದರಲ್ಲಿ ಎಸೆಯದೆ ಸ್ವಚ್ಚವಾಗಿಡಬೇಕು ಇದಕ್ಕಾಗಿ ಘನ ತ್ಯಾಜ್ಯ ಘಟಕವನ್ನು ಕೂಡ ತೆರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಧಿಕಾರಿ ಸಂತೋಷ್ ಸೇರಿದಂತೆ, ಜೆಸಿಐ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.