ಆಕ್ಲೆಂಡ್ : ಇಂದು ಈಡನ್ ಪಾರ್ಕ್‍ನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ-20 ಪಂದ್ಯದಲ್ಲಿ ಕೊಹ್ಲಿ ಪಡೆ 6 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ನೀಡಿದ್ದ 204 ರನ್‍ಗಳ ಗುರಿ ಬೆನ್ನಟ್ಟಿದ ಕೊಹ್ಲಿ ಪಡೆಗೆ ಆರಂಭದಲ್ಲೇ ಆಘಾತ ಉಂಟಾಗಿತ್ತು. ರೋಹಿತ್ ಶರ್ಮಾ(07) ಗಳಿಸಿ ಓಟಾದರೆ ಕೆ.ಎಲ್. ರಾಹುಲ್(56), ಶ್ರೇಯಸ್ ಅಯ್ಯರ್ ಓಟಾಗದೆ(59)ರನ್, ವಿರಾಟ್ ಕೊಹ್ಲಿ(45) ರನ್, ಮನೀಶ್ ಪಾಂಡೆ ಓಟಾಗದೆ(14)ರನ್ ಹಾಗೂ ಶಿವಮ್ ದುಬೆ(13) ರನ್ ಗಳಿಸಿದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ನ್ಯೂಜಿಲೆಂಡ್ ಪರವಾಗಿ ಬ್ಯಾಟ್ ಬೀಸಿದ ಕಾಲಿನ್ ಮನ್ರೋ(59) ರನ್, ಕೇನ್ ವಿಲಿಯಮ್ಸನ್(51), ರಾಸ್ ಟೇಲರ್(54) ಹಾಗೂ ಮಾರ್ಟಿನ್ ಗಫ್ಟಿಲ್(30) ರನ್ ಸಿಡಿಸುವ ಮೂಲಕ 204 ರನ್‍ಗಳ ಗುರಿ ನೀಡಿತ್ತು. 59 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೇಯಸ್ ಅಯ್ಯರ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.










