ಪಂಜಾಬ್ ನ ಮಹಿಳೆಯೊಬ್ಬರು ಕೂದಲಿನಿಂದ ಬರೋಬ್ಬರಿ 12,000 ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ.
ಇಟಲಿಯ ಮಿಲನ್ ನಲ್ಲಿರುವ ‘ಲೋ ಶೋ ಡೀ ರೆಕಾರ್ಡ್’ ಸೆಟ್ ನಲ್ಲಿ ಆಶಾ ರಾಣಿ ಎಂಬುವವರು 2016 ರಲ್ಲಿ 12,216 ಕೆಜಿ ತೂಕದ ಡಬಲ್ ಡೆಕ್ಕರ್ ಬಸ್ ಅನ್ನು ತನ್ನ ಕೂದಲನ್ನು ಬಳಸಿ ಎಳೆದಿದ್ದರು. ಅವರು ವಿಶ್ವ ದಾಖಲೆ ನಿರ್ಮಿಸಿದ ವೀಡಿಯೊವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನ ಅಧಿಕೃತ ಇನ್ ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಹಂಚಿಕೊಳ್ಳಲಾಗಿದೆ.
ಈ ವೀಡಿಯೊ ವೈರಲ್ ಆಗಿದ್ದು, 55,000ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಆಶಾ ಅವರ ಶಕ್ತಿ ಮತ್ತು ಸಾಮರ್ಥ್ಯವನ್ನು ಶ್ಲಾಘಿಸಿ ಹಲವು ಜನರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಆಶಾ ರಾಣಿ ಅವರ ಹೆಸರಿನಲ್ಲಿ ಹಲವು ದಾಖಲೆಗಳಿವೆ. 2 ವರ್ಷಗಳ ಹಿಂದೆ ತನ್ನ ಕಿವಿಗಳನ್ನು ಬಳಸಿ 1,700 ಕೆಜಿ ತೂಕದ ವ್ಯಾನ್ ಎಳೆಯುವ ಮೂಲಕ ದಾಖಲೆ ನಿರ್ಮಿಸಿದ್ದರು.










