ಕೃಷಿ ಹೊಂಡದಲ್ಲಿ ಸ್ಫೋಟ: ಡ್ರೋನ್ ಪ್ರತಾಪ್‍ಗೆ 10 ದಿನ ನ್ಯಾಯಾಂಗ ಬಂಧನ.

31

ತುಮಕೂರು: ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‍ಗೆ ಡಿಸೆಂಬರ್ 26ರವರೆಗೂ ನ್ಯಾಯಾಂಗ ಬಂಧನ ಮಧುಗಿರಿಯ ಜೆಎಂಎಫ್‍ಸಿ ನ್ಯಾಯಾಲಯ ಆದೇಶಿಸಿದೆ. ಅನುಮತಿ ಇಲ್ಲದೇ ಸ್ಫೋಟಗೊಳಿಸಿದ್ದಕ್ಕೆ ಡ್ರೋನ್ ಪ್ರತಾಪ್‍ನನ್ನು ಮಿಡಿಗೇಶಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ನ್ಯಾಯಾಲಯದ ಮುಂದೆ ಹಾಜಪಡಿಸಿದರು. ತುಮಕೂರಿನಲ್ಲಿ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ಅವರನ್ನು ಮಿಡಿಗೇಶಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನುಮತಿಯಿಲ್ಲದೆ ಸ್ಫೋಟಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಅವರನ್ನು ಮಧುಗಿರಿ ಜೆಎಂಎಫ್‍ಸಿ ನ್ಯಾಯಾಲಯವು ಡಿಸೆಂಬರ್ 26 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.