ಕೊರೊನಾ ನಡುವೆಯೂ ಮಾದಪ್ಪನಿಗೆ ಬಂತು ಕೋಟಿ ಕಾಣಿಕೆ!

90
firstsuddi

ಚಾಮರಾಜನಗರ : ಕೊರೊನಾ ನಡುವೆಯೂ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. 

ದೇವಾಲಯ ತೆರೆದಿದ್ದ ಒಟ್ಟು 56 ದಿನಗಳಲ್ಲಿ ಬರೋಬ್ಬರಿ 2,62,76,718 ರೂ. ಸಂಗ್ರಹವಾಗಿದೆ. ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ನಿನ್ನೆ ಬೆಳಗ್ಗೆ 7.30ರಿಂದ ರಾತ್ರಿ 11.30ರ ವರೆಗೂ ನಡೆದಿದ್ದು, 170 ಗ್ರಾಂ ಚಿನ್ನ, 3.7 ಕೆಜಿ ಬೆಳ್ಳಿ ಹುಂಡಿಯಲ್ಲಿ ಸಿಕ್ಕಿವೆ.