ಕೌಟುಂಬಿಕ ಕಲಹಕ್ಕೆ ಬೇಸತ್ತು ಇಬ್ಬರು ಸಹೋದರಿಯರು ಆತ್ಮಹತ್ಯೆ…

47
firstsuddi

ಮಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ವೃದ್ಧ ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕದ್ರಿ ಕಂಬಳ ಪ್ರದೇಶದಲ್ಲಿ ನಡೆದಿದೆ.

ಮೃತ ಸಹೋದರಿಯರನ್ನು 70 ವರ್ಷದ ಲತಾ ಭಂಡಾರಿ ಹಾಗೂ 80 ವರ್ಷದ ಸುಂದರಿ ಶೆಟ್ಟಿ ಎಂದು ಗುರುತಿಸಲಾಗಿದೆ.
78ರ ಹರೆಯದ ಜಗನ್ನಾಥ್ ಭಂಡಾರಿ ಮತ್ತವರ ಪತ್ನಿ ಲತಾ ಭಂಡಾರಿ ಹಾಗೂ ಲತಾ ಭಂಡಾರಿಯ ಅಕ್ಕ ಸುಂದರಿ ಶೆಟ್ಟಿ ಎಂಬವರು ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ವಾಸಿಸುತ್ತಿದ್ದರು.

ಎಂದಿನಂತೆ ಜಗನ್ನಾಥ್ ಭಂಡಾರಿ ಕೆಲಸಕ್ಕೆ ಹೋದವರು ಸಂಜೆ 4:30ರ ವೇಳೆಗೆ ಮನೆಗೆ ತೆರಳಿದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಜಗನ್ನಾಥ್ ಭಂಡಾರಿ ಮನೆಗೆ ತೆರಳಿದಾಗ ಮನೆಯ ಬಾಗಿಲು ಮುಚ್ಚಲ್ಪಟ್ಟಿತ್ತು. ಕಿಟಕಿಯಿಂದ ನೋಡಿದಾಗ ಸಹೋದರಿಯರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರಿದಿದೆ.