ಗಡಿ ದಾಟಿ ಭಾರತಕ್ಕೆ ಬಂದ ಪಾಕ್‍ನ ಮಗು – ಕುಟುಂಬಸ್ಥರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಯೋಧರು.

104
firstsuddi

ಚಂಡೀಗಢ : ಭಾರತದ ಗಡಿ ಪ್ರವೇಶಿಸಿದ್ದ 3 ವರ್ಷದ ಮಗುವನ್ನು ಭಾರತದ ಭದ್ರತಾಪಡೆ ಕುಟುಂಬಸ್ಥರಿಗೆ ಹಸ್ತಾಂತರಿಸುವ ಮೂಲಕ  ಮಾನವೀಯತೆ ಮೆರೆದಿದ್ದಾರೆ.

ಭಾರತದ ಗಡಿಭಾಗವಾದ ಪಂಜಾಬ್ ನ ಫಿರೋಜ್ ಪುರ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಮೂರು ವರ್ಷದ ಮಗು ಭಾರತ ಪ್ರವೇಶಿಸಿದೆ. ಈ ವೇಳೆ ಮಗು ಅಳುತ್ತಿರುವ ಶಬ್ದವನ್ನು ಬಿಎಸ್ ಎಫ್ ಯೋಧರು ಗಮನಿಸಿದ್ದಾರೆ. ಅದರಂತೆ ಬಿಎಸ್ಎಫ್ ಪಂಜಾಬ್ ಫ್ರಾಂಟಿಯರ್ ನ 182 ಬೆಟಾಲಿಯನ್ ಸೈನಿಕರು ಪಾಕಿಸ್ತಾನಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಮಗು ಅಚಾತುರ್ಯದಿಂದ ಗಡಿ ದಾಟಿದ ಪ್ರಕರಣ ಎಂದು ಅರಿತ ಬಿಎಸ್ಎಫ್ ಪಾಕ್ ರೇಂಜರ್ ಗಳನ್ನು ಸಂಪರ್ಕಿಸಿದೆ. ಬಳಿಕ ಬಿಎಸ್‍ಎಫ್ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಗಡಿಗೆ ತೆರಳಿ ಮಗುವನ್ನು ಕುಟುಂಬಸ್ಥರ ಮಡಿಲು ಸೇರಿಸಿದ್ದಾರೆ.