ಟಿಕ್ ಟಾಕ್ ಮಾಡಲು ಹೋಗಿ ಬೆನ್ನುಮೂಳೆ ಮುರಿದುಕೊಂಡ ಯುವಕ…

303

ತುಮಕೂರು : ಟಿಕ್ ಟಾಕ್ ವೀಡಿಯೋ ಮಾಡಲು ಹೋಗಿ ಬೆನ್ನು ಹಾಗೂ ಕುತ್ತಿಗೆ ಮೂಳೆ ಮುರಿದುಕೊಂಡಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದಲ್ಲಿ ನಡೆದಿದೆ. ಕುಮಾರ್ ಎಂಬ ಯುವಕ ತನ್ನ ಸ್ನೇಹಿತನ ಜೊತೆ ಬ್ಯಾಕ್ ಜಂಪ್ ಮಾಡುವ ಸಾಹಸಕ್ಕೆ ಮುಂದಾಗಿದ್ದು, ಜಂಪ್ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಯುವಕನ ಬೆನ್ನು ಮೂಳೆ ಮುರಿದು ಹೋಗಿದ್ದು, ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.