ಟೀಂ ಇಂಡಿಯಾ ವಿರುದ್ಧ ವಿಶ್ವ ದಾಖಲೆಯನ್ನು ಬರೆದ ಆಸ್ಟ್ರೇಲಿಯಾ ತಂಡದ ಆಟಗಾರ ಸ್ಟೀವ್ ಸ್ಮಿತ್.

33

ಆಸ್ಟ್ರೇಲಿಯಾ ತಂಡ ಮೆಲ್ಬೋರ್ನ್‍ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನದ ಆಟದಲ್ಲಿ 400 ರನ್‍ಗಳಿಸಿದೆ. ಸ್ಟೀವ್ ಸ್ಮಿತ್ 167 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‍ಗಳೊಂದಿಗೆ ತಮ್ಮ 34ನೇ ಟೆಸ್ಟ್ ಶತಕ ಪಡೆದಿದ್ದಾರೆ. ಇದು ಭಾರತದ ವಿರುದ್ಧ ಅವರ 11ನೇ ಶತಕವಾಗಿದ್ದು, ಜೋ ರೂಟ್ ಅವರನ್ನು ಹಿಂದಿಕ್ಕಿ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿಯೂ ಅತಿ ಹೆಚ್ಚಿನ ಶತಕಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಯಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನದ ಆಟವನ್ನು ಆರಂಭಿಸಿರುವ ಆಸ್ಟ್ರೇಲಿಯಾ ತಂಡ ಮೊದಲ ಸೆಷನ್ ಮುಗಿಯುವ ಮುನ್ನವೇ 400 ರನ್‍ಗಳ ಗಡಿಯನ್ನು ದಾಟಿತ್ತು. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 62 ಆಗಿತ್ತು. ಇದು ಅವರ ಸತತ ಎರಡನೇ ಶತಕವಾಗಿದೆ. ಬ್ರಿಸ್ಬೇನ್‍ನ ಗಬ್ಬಾದಲ್ಲಿ ನಡೆದ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಶತಕ ಬಾರಿಸಿದ್ದರು. ಈ ಮೂಲಕ ಸ್ಟೀವ್ ಸ್ಮಿತ್ ಟೀಂ ಇಂಡಿಯಾ ವಿರುದ್ಧ ಅದ್ಭುತ ದಾಖಲೆಯನ್ನು ಪಡೆದಿದ್ದಾರೆ. ಅವರು ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‍ನಲ್ಲಿ 11 ಶತಕಗಳನ್ನು ಗಳಿಸಿದ ವಿಶ್ವದ ಮೊದಲನೆಯ ಬ್ಯಾಟ್ಸ್‍ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಚಾರದಲ್ಲಿ ಅವರು ಇಂಗ್ಲೆಂಡ್ ಬ್ಯಾಟ್ಸ್‍ಮನ್ ಜೋ ರೂಟ್ ಅವರನ್ನು ಹಿಂದಿಕ್ಕಿದ್ದಾರೆ. ಸ್ಟೀವ್ ಸ್ಮಿತ್ ಅವರ ಈ ಶತಕದ ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ತವರಿನಲ್ಲಿ ಆಡಿದ ಕೊನೆಯ 10 ಮೊದಲ ಇನ್ನಿಂಗ್ಸ್‍ಗಳಲ್ಲಿ ಸ್ಟೀವ್ ಸ್ಮಿತ್ ಭಾರತದ ವಿರುದ್ಧ 7 ಶತಕಗಳನ್ನು ಗಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಗರಿಷ್ಠ ಶತಕ ಪಡೆದಿರುವ ದಾಖಲೆ ಈಗ ಸ್ಟೀವ್ ಸ್ಮಿತ್ ಹೆಸರಿನಲ್ಲಿದೆ. ಈ ವಿಷಯದಲ್ಲಿ ಅವರು ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ ಸ್ಮಿತ್ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಫೈನಲ್‍ನಲ್ಲಿಯೂ ಭಾರತದ ವಿರುದ್ಧ ಶತಕ ಬಾರಿಸಿದ್ದರು ಎಂದು ತಿಳಿದಿದೆ.