ಬೆಂಗಳೂರು : ದೆಹಲಿ ನಿವಾಸದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಶದಲ್ಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಡಿಕೆಶಿ ಅವರ ಮಗಳು ಐಶ್ವರ್ಯಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮ್ಮನ್ಸ್ ಜಾರಿ ಮಾಡಿದೆ. ಐಶ್ವರ್ಯಾ ಅವರ ಹೆಸರಿನಲ್ಲಿ ಸೋಲ್ & ಸೇಲ್ಸ್ ಕಂಪನಿಯಲ್ಲಿ 78 ಕೋಟಿ ರೂ ಹಣವನ್ನು ಹೂಡಿಕೆ ಮಾಡಲಾಗಿದ್ದು, ಅಲ್ಲದೇ ನ್ಯಾಶನಲ್ ಗ್ಲೋಬಲ್ ಕಾಲೇಜಿನಲ್ಲಿ ಐಶ್ವರ್ಯ ಟ್ರಸ್ಟಿಯಾಗಿದ್ದಾರೆ. ಈ ವಿಚಾರವಾಗಿ ಇಡಿ ಅಧಿಕಾರಿಗಳು ಡಿಕೆಶಿ ಅವರ ಬಳಿ ವಿಚಾರಣೆ ನಡೆಸಿದಾಗ ಆ ಹಣ ನನ್ನ ಹಿತೈಷಿಗಳು ಹಾಗು ಕುಟುಂಬಸ್ಥರು ನೀಡಿದ ಹಣ ಎಂದು ತಿಳಿಸಿದ್ದರು. ಅಲ್ಲದೆ ಐಶ್ವರ್ಯ ಅವರ ಖಾತೆಯಿಂದ 20 ಕೋಟಿ ಹಣ ವರ್ಗಾವಣೆಯಾಗಿದ್ದು, ಹೀಗಾಗಿ ಇಡಿ ಅಧಿಕಾರಿಗಳು ಐಶ್ವರ್ಯಾ ಅವರನ್ನು ಸೆ.12ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮ್ಮನ್ಸ್ ಜಾರಿ ಮಾಡಿದ್ದಾರೆ.










