ಬೆಂಗಳೂರು : ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಲಯಾಳಂ ಕಿರುತೆರೆ ನಟ ಸೇರಿದಂತೆ ಮೂವರನ್ನು ಹೆಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಟ ಶಿಯಾಜ್ ಮತ್ತು ಸಹಚರರಾದ ಮೊಹಮ್ಮದ್ ಶಾಹಿದ್ ಹಾಗೂ ಮಂಗಲ್ ತೋಡಿ ಜಿತೀನ್ ಬಂಧಿತರು.
ಶಿಯಾಜ್ ಮಲಯಾಳಂ ಕಿರುತೆರೆಯಲ್ಲಿ ಸಹನಟನಾದರೆ ಮೊಹಮ್ಮದ್ ಶಾಹಿದ್ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿಗಳು ಕೇರಳದಿಂದ ನಗರಕ್ಕೆ ಬಂದು ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕವಸ್ತು ಮಾರಾಟ ಮಾಡುತ್ತಿದ್ದರು. ಜೊತೆಗೆ ಹೈಫೈ ಪಾರ್ಟಿಗಳಿಗೂ ಗಾಂಜಾ ಮತ್ತು ಎಂಡಿಎಂಎ ಅನ್ನು ಸಪ್ಲೈ ಮಾಡುತ್ತಿದ್ದರು. ಸದ್ಯ ಆರೋಪಿಗಳಿಂದ 13 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.










