ಚಿಕ್ಕಮಗಳೂರು:- ನಗರದ ಬಿಎಸ್ ಪಿ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಅಕ್ಕ ಮಾಯಾವತಿಯವರ ಜನ್ಮದಿನವನ್ನು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ನಿನ್ನೆ ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ ಬಿ ಸುಧಾ ಅಕ್ಕ ಮಾಯಾವತಿಯವರು ಬೆಳೆದು ಬಂದ ಹಾದಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅವರು ಮಾಡಿದ ಪ್ರಗತಿಯನ್ನು ವಿವರಿಸಿದರು.
ದಲಿತ ಮಹಿಳೆಯೋರ್ವರು ಅದೂ ಸಣ್ಣ ವಯಸ್ಸಿನಲ್ಲೇ ಉತ್ತರ ಪ್ರದೇಶದಂತಹ ಅತಿ ದೊಡ್ಡ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದು ಯಾರಿಗೂ ಯಾವುದಕ್ಕೂ ಹೆದರದೆ ಬಗ್ಗದೆ ಜನಪರವಾಗಿ ಕೆಲಸ ಮಾಡಿದ್ದು ಅಕ್ಕ ಮಾಯಾವತಿಯವರ ಹೆಗ್ಗಳಿಕೆಯಾಗಿದೆ ಎಂದರು.
ಬಿಎಸ್ ಪಿ ಜಿಲ್ಲಾಧ್ಯಕ್ಷ ಕೆ ಟಿ ರಾಧಾಕೃಷ್ಣ ಮಾತನಾಡಿ ಅಕ್ಕ ಮಾಯಾವತಿಯವರು ದೇಶದ ಪ್ರಧಾನಿಯಾದರೆ ಸಂವಿಧಾನವನ್ನು ಇಡಿಯಾಗಿ ಜಾರಿಗೆ ತರುತ್ತಾರೆ ಬಡವರು ಹಿಂದುಳಿದವರು ಕೆಳ ವರ್ಗದವರು ನೆಮ್ಮದಿಯಿಂದ ಬದುಕುವ ಹಾಗೆ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಪಕ್ಷದ ಕಾರ್ಯಕರ್ತರು ಕೆಳ ವರ್ಗದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್‍ಪಿಯನ್ನು ಚುನಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಲೋಕಸಭಾ ಕ್ಷೇತ್ರದ ಸಂಯೋಜಕ ಪಿ ಪರಮೇಶ್ವರ್ ಮಾತನಾಡಿದರು. ಜನ್ಮದಿನದ ಅಂಗವಾಗಿ ಕಾರ್ಯಕರ್ತರಿಗೆ ಸಿಹಿ ವಿತರಿಸಲಾಯಿತು ಅಸೆಂಬ್ಲಿ ಅಧ್ಯಕ್ಷ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಪಾಧ್ಯಕ್ಷೆ ಕೆಎಸ್ ಮಂಜುಳಾ, ಕಾರ್ಯದರ್ಶಿ ಪುಟ್ಟಸ್ವಾಮಿ, ಲೋಕಸಭಾ ಕ್ಷೇತ್ರದ ಸಂಯೋಜಕ ಕೆ ಆರ್ ಗಂಗಾಧರ್, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ ವಸಂತ್ಉ, ಪಾಧ್ಯಕ್ಷ ಸಿದ್ದಯ್ಯ, ಕಚೇರಿ ಕಾರ್ಯದರ್ಶಿ ಕಲಾವತಿ, ರತ್ನಮ್ಮ, ಬಿ ಹೆಚ್ ವಿಜಯಕುಮಾರ್, ಕಿಟ್ಟು, ವೆಂಕಟೇಶ್ ಉಪಸ್ಥಿತರಿದ್ದರು.










