ಮುಂಬರಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯ ಸಾಧಿಸಿದರೆ ದೇವಸ್ಥಾನಗಳ ಅರ್ಚಕರು, ಗುರುದ್ವಾರಗಳಲ್ಲಿನ ಗ್ರಂಥಿಗಳ ಸಹಾಯಧನ 18 ಸಾವಿರ ರೂಪಾಯಿಗೆ ಹೆಚ್ಚಿಸಲಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ, ದೇವಸ್ಥಾನಗಳಲ್ಲಿ ಕೆಲಸ ಮಾಡುವ ಎಲ್ಲಾ ಅರ್ಚಕರು ಮತ್ತು ನಗರದಾದ್ಯಂತ ಗುರುದ್ವಾರಗಳಲ್ಲಿ ಗ್ರಂಥಿಗಳಿಗೆ ತಿಂಗಳಿಗೆ 18 ಸಾವಿರ ರೂ.ಗಳನ್ನು ನೀಡುತ್ತೇವೆ ಎಂದು ಎಎಪಿ ಭರವಸೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಪೂಜಾರಿ ಗ್ರಂಥಿ ಸಮ್ಮಾನ್ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಸಿಎಂ ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವನಿ ಯೋಜನೆ ಮತ್ತು ಅರ್ಚಕರಿಗೆ ಗೌರವಧನ ನೀಡುವ ಯೋಜನೆಯನ್ನು ವಿರೋಧಿಸಬೇಡಿ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಬಿಜೆಪಿ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ. ದಲಿತರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಸೇರಿದಂತೆ ನಿರ್ದಿಷ್ಟ ವರ್ಗದ ಮತದಾರರನ್ನು ಗುರಿಯಾಗಿಸಿಕೊಂಡು ಪಕ್ಷ ಇದುವರೆಗೆ ನಾಲ್ಕು ಕಲ್ಯಾಣ ಯೋಜನೆಗಳನ್ನು ಘೋಷಿಸಲಾಗಿದೆ. ನಗರದಲ್ಲಿ 24/7 ನೀರು ಪೂರೈಕೆ ಮಾಡುವ ಭರವಸೆಯನ್ನೂ ನೀಡಿದೆ. ಅವರು ಸುಮಾರು 20 ಪ್ರತಿಶತ ಮತದಾರರನ್ನು ಹೊಂದಿರುವ ಪಂಡಿತರು ಮತ್ತು ಸಿಖ್ ಮತದಾರರನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಯೋಜನೆಯು ಚರ್ಚ್‍ಗಳಲ್ಲಿನ ಪಾದ್ರಿಗಳನ್ನು ಒಳಗೊಳ್ಳುತ್ತದೆಯೇ ಎಂಬುದನ್ನು ಕೇಜ್ರಿವಾಲ್ ಉಲ್ಲೇಖಿಸಲಿಲ್ಲ. ಅರ್ಚಕರಿಗಾಗಿ ಇಂತಹ ಯೋಜನೆಗಳನ್ನು ಘೋಷಿಸಿದ ದೇಶದ ಮೊದಲ ಪಕ್ಷ ಎಎಪಿ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು. ದೇಶದ ಯಾವ ಪಕ್ಷವೂ ಇಂತಹ ಯೋಜನೆ ತಂದಿಲ್ಲ ಎಂದು ಹೇಳಿದರು. ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಮಂಗಳವಾರ ಕನ್ನಾಟ್ ಪ್ಲೇಸ್‍ನಲ್ಲಿರುವ ಹನುಮಾನ್ ದೇವಾಲಯದಲ್ಲಿ ಪ್ರಾರಂಭಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದರು ಎಂದು ತಿಳಿಸಲಾಗಿದೆ.










