ರಾಯಚೂರು: ಸಾಲು ಸಾಲು ರಜೆಗಳ ಹಿನ್ನೆಲೆ ಮಂತ್ರಾಲಯ ರಾಯರ ಮಠಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಕ್ರಿಸ್‍ಮಸ್ ರಜೆ, ಹೊಸವರ್ಷದ ಆಚರಣೆ ದಿನ, ಅಮವಾಸ್ಯೆ ಹಿನ್ನೆಲೆ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ. ಸಾವಿರಾರು ಭಕ್ತರ ಭೇಟಿಯಿಂದ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠ ತುಂಬಿ ಹೋಗಿದ್ದು, ಮಠದ ರೂಮ್‍ಗಳಿಗೆ ಆನ್‍ಲೈನ್ ಬುಕಿಂಗ್ ಮಾಡುವುದನ್ನು ಬಂದ್ ಮಾಡಲಾಗಿದೆ. ಕೇವಲ ಆಫ್‍ಲೈನ್ ಬುಕಿಂಗ್‍ಗೆ ಮಾತ್ರ ಅವಕಾಶ ನೀಡಲಾಗಿದ್ದು, ಭಕ್ತರು ರೂಮ್‍ಗಳಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಎನ್‍ಜಿಒಗಳಿಗೆ ತಾಲಿಬಾನ್ ಎಚ್ಚರಿಕೆ ಕಳೆದ 4-5 ದಿನಗಳಿಂದ ಮಂತ್ರಾಲಯ ಮಠದಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ ಡಿಸೆಂಬರ್ 25 ರಿಂದ ಜನವರಿ 2 ರವರೆಗೆ ರೂಮ್‍ಗಳ ಆನ್‍ಲೈನ್ ಬುಕ್ಕಿಂಗ್ ಬಂದ್ ಮಾಡಲಾಗಿದ್ದು, ಜನವರಿ 1ರ ವರೆಗೆ ಇದೇ ರೀತಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ಶ್ರೀ ರಾಯರ ಮಠದ ಅಧಿಕಾರಿಗಳು ವರದಿ ತಿಳಿಸಿದ್ದಾರೆ. ಇನ್ನೂ ಮಠದ ಪ್ರಾಂಗಣ ಹಾಗೂ ರಾಜಬೀದಿಯಲ್ಲಿ ಎಲ್ಲೂ ನೋಡಿದರೂ ರಾಯರ ಭಕ್ತರೇ ಕಾಣಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.










