ನಮ್ಮ ನಾಡಿನ ಅತ್ಯಂತ ಕಿರಿಯ ಪ್ರತಿಭಾವಂತನನ್ನು ಕಳೆದುಕೊಂಡಿದ್ದೇವೆ : ಆರಗ ಜ್ಞಾನೇಂದ್ರ.

106
firstsuddi

ಬೆಂಗಳೂರು : ಈ ಬಾರಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲು ಏರ್ಪಾಡಾಗಿತ್ತು. ಆದರೆ, ಸೂತಕದ ಛಾಯೆ ಕವಿದಿದೆ. ನಮ್ಮ ನಾಡಿನ ಅತ್ಯಂತ ಕಿರಿಯ ಪ್ರತಿಭಾವಂತನನ್ನು ಕಳೆದುಕೊಂಡಿದ್ದೇವೆ. ಅವರ ನಿಧನ ನಮಗೆ ದೊಡ್ಡ ಆಘಾತವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಆರು ಲಕ್ಷ ಜನ ಅಪ್ಪುವಿನ ದರ್ಶನ ಪಡೆದಿದ್ದಾರೆ. ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಬಾರದು. ಜನರು ಅಶಾಂತಿ ತರುವ ಕೆಲಸ ಮಾಡಬಾರದು. ನಮ್ಮ ಪೊಲೀಸ್ ತಂಡ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. 20,000 ಬೆಂಗಳೂರು ಪೊಲೀಸ್, 1,500 ಇತರ ಜಿಲ್ಲೆಗಳಿಂದ ಪೊಲೀಸರು, ಸೆಂಟ್ರಲ್ ರಿಸರ್ವ್ ಪೊಲೀಸರು, ಕೆಎಎಸ್​​ಆರ್​​ಪಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.