ಕೊಪ್ಪಳ : ಸಾಮಾನ್ಯವಾಗಿ ಒಂದು ಬೈಕ್ನಲ್ಲಿ ಅಬ್ಬಬ್ಬಾ ಅಂದ್ರೆ ಮೂರು ಜನ ಅಥವಾ ನಾಲ್ಕು ಜನ ಪ್ರಯಾಣ ಮಾಡಿರೋದನ್ನ ನಾವು ನೋಡಿರುತ್ತೇವೆ. ಆದ್ರೆ ಇಲ್ಲಿ ಒಂದೇ ಬೈಕ್ನಲ್ಲಿ ಒಂಬತ್ತು ಜನ ಸವಾರಿ ಮಾಡಿದ್ದಾರೆ.
ಹೌದು, ಈ ದೃಶ್ಯ ಕಂಡು ಬಂದಿದ್ದು, ತಾಲೂಕಿನ ಗಿಣಗೇರಿ ಗ್ರಾಮದ ಬಳಿ. ಗಿಣಗೇರಾ ಗ್ರಾಮದಿಂದ ಗಂಗಾವತಿ ಕಡೆ ಹೊರಟಿದ್ದ, ಹೀರೋ ಹೊಂಡಾ ಸ್ಪೆಂಡರ್ ಬೈಕ್ ನಲ್ಲಿ ಕುಟುಂಬದ ಒಂಬತ್ತು ಜನ ಸದಸ್ಯರು ಪ್ರಯಾಣ ಮಾಡಿದ್ದಾರೆ.
ನಾಲ್ಕು ಜನರು ಹಿರಿಯರು, ಐದು ಜನ ಮಕ್ಕಳು ಒಂದೇ ಬೈಕ್ನಲ್ಲಿ ಸವಾರಿ ಮಾಡಿರೋ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇದು ಅಪಾಯಕಾರಿ ಪ್ರಯಾಣವಾಗಿದ್ದರೂ, ಒಂದೇ ಬೈಕ್ನಲ್ಲಿ ಒಂಬತ್ತು ಜನ ಪ್ರಯಾಣ ಮಾಡಿರುವುದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ.










