ಪೊಲೀಸರನ್ನೂ ಕೂಡ ಬಿಡದ ಸೈಬರ್ ವಂಚಕರು.

39

ಬೆಂಗಳೂರು: ಎಪಿಕೆ ಫೈಲ್‍ಗಳನ್ನು ಬಳಸಿ ವಾಟ್ಸ್ಆ್ಯಪ್, ಮೊಬೈಲ್ ನಂಬರ್ ಹ್ಯಾಕ್ ಮಾಡುವ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಹೆಚ್ಚಾಗಿದ್ದು, ಇದೀಗ ಬೆಂಗಳೂರು ಪೊಲೀಸರಿಗೂ ಕೂಡ ಅದರ ಬಿಸಿ ತಟ್ಟಿದೆ. ಬೆಂಗಳೂರಿನ ಹಲವು ಪೊಲೀಸ್ ಅಧಿಕಾರಿಗಳ ಮೊಬೈಲ್ ಫೋನ್ ನಂಬರ್‌ಗಳು ಮತ್ತು ವಾಟ್ಸ್ಆ್ಯಪ್ ಖಾತೆಗಳನ್ನು ಸೈಬರ್ ವಂಚಕರು ಬುಧವಾರ ಎಪಿಕೆ ಫೈಲ್ ಲಿಂಕ್ ಕಳುಹಿಸಿ ಹ್ಯಾಕ್ ಮಾಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು, ಇನ್ಸ್ ಪೆಕ್ಟರ್‌ಗಳು ಸೇರಿದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಅಪರಿಚಿತ ನಂಬರ್‍ನ ರಿಸೀವರ್‍ಗಳು ವಾಟ್ಸ್ಆ್ಯಪ್ ನಲ್ಲಿ ಕಳುಹಿಸಿದ ಎಪಿಕೆ ಫೈಲ್ ಲಿಂಕ್ ಅನ್ನು ದುರುಪಯೋಗ ಪಡಿಸಿಕೊಳ್ಳಲು ಎಂದು ತಿಳಿಯದೆ ಕ್ಲಿಕ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದಾಗಿ ಠಾಣೆಗಳ ಇನ್ಸ್ ಪೆಕ್ಟರ್‌ಗಳು , ಕಾನ್ಸ್ ಟೇಬಲ್‌ಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ವಂಚಕರು ಆಡುಗೋಡಿ ಟ್ರಾಫಿಕ್ ಮತ್ತು ಜ್ಞಾನಭಾರತಿ, ಗಿರಿನಗರ ಮತ್ತು ಬಸವನಗುಡಿ ಪೊಲೀಸ್ ಠಾಣೆ ಸೇರಿದಂತೆ ಕೆಲವು ಠಾಣೆಗಳ ಪೊಲೀಸ್ ಇನ್ಸ್ ಪೆಕ್ಟರ್‌ಗಳ ಅಧಿಕೃತ ಮೊಬೈಲ್ ನಂಬರ್‌ಗಳನ್ನು ಹ್ಯಾಕ್ ಮಾಡಿದ್ದಾರೆ. ಅವರ ಗೆಳಯರು, ಸಹೋದ್ಯೋಗಿಗಳು ಮತ್ತು ಕುಟುಂಬ ಸದಸ್ಯರು ಮತ್ತು ಗುಂಪುಗಳಿಗೆ ಎಪಿಕೆ ಫೈಲ್ ಲಿಂಕ್‍ಗಳನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಲಿಂಕ್ ಡೌನ್‍ಲೋಡ್ ಮಾಡಿದ ಬಳಿಕ ಹಣವನ್ನು ಕಳೆದುಕೊಂಡ ಬಗ್ಗೆ ಯಾವುದೇ ದೂರು ಅಥವಾ ವರದಿ ಇನ್ನೂ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.