ಬಿಬಿಎಂಪಿ ಕಚೇರಿಗಳ ಮೇಲೆ ಮುಂದುವರಿದ ಎಸಿಬಿ ದಾಳಿ…

61
firstsuddi

ಬೆಂಗಳೂರು : ಬಿಬಿಎಂಪಿಯ ಹಲವು ಕಚೇರಿಗಳ ಮೇಲೆ ಇಂದು ಕೂಡ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ದಾಳಿ ಮುಂದುವರಿದಿದೆ.

ಬೆಂಗಳೂರಿನ ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ವಿವಿಧ ವಲಯ ಕಚೇರಿಗಳಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿಯ 10 ತಂಡಗಳಿಂದ ಶೋಧ ಕಾರ್ಯಚರಣೆ ನಡೆಯುತ್ತಿದ್ದು, ಕಂದಾಯ, ಇಂಜಿನಿಯರಿಂಗ್, ಟಿಡಿಆರ್ ವಿಭಾಗಕ್ಕೆ ಸಂಬಂಧಿಸಿದ ಕಡತಗಳ ಶೋಧ ನಡೆಸುತ್ತಿದ್ದಾರೆ. ಫೀಲ್ಡ್ ವಿಸಿಟ್ ಮೂಲಕ ಮಾಹಿತಿ ಕಲೆ ಹಾಕಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟೆಂಡರ್, ಟಿಡಿಆರ್ ಸೇರಿದಂತೆ ಹಲವು ವಿಭಾಗದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಕಳೆದ ಐದಾರು ವರ್ಷದ ಫೈಲ್ ಗ ಳನ್ನ ಎಸಿಬಿ ತಂಡ ಹೊರ ತೆಗೆದಿದ್ದಾರೆ. ರಾಜಕಾಲುವೆ, ಕೆರೆಗಳಿಗೆ ಸಂಬಂಧಿಸಿದ ಫೈಲ್ ಗಳು, ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದ ಕಡತಗಳ ಪರಿಶೀಲನೆ ಮಾಡಿದ್ದು, ಇನ್ನೂ ಮೂರು ದಿನಗಳ ಕಾಲ ಎಸಿಬಿ ದಾಳಿ ಮುಂದುವರಿಯುವ ಸಾಧ್ಯತೆ ಇದೆ.